ಮುದಗಲ್ಲ ವರದಿ..
ಪುರಸಭೆ ವತಿಯಿಂದ ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಣೆ..
ಮುದಗಲ್ಲ :- ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬನೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು’ ಎಂದು ಪುರಸಭೆ ಯ ಮ್ಯಾನೇಜರ್ ರಾದ ಸುರೇಶ್ ಹೊನ್ನಳ್ಳಿ ಅವರು ಹೇಳಿದರು.
ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ ಅವರುಮಾತನಾಡಿದರು ಜಾತಿ–ಮತಗಳ ಕುಲಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ–ದಲಿತರ–ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ನಂತರ ಮಾತನಾಡಿದ ನೈಮಲ್ಯ ವಿಭಾಗದ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ ಅವರು ‘ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಯೋಗಿ ನಾರೇಯಣ ಯತಿಂದ್ರ ಅವರು ಪದ್ಯ, ಕೀರ್ತನೆ ಹಾಗೂ ಸ್ತೋತ್ರಗಳ ಮೂಲಕ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ್ ಯೋಗಿ. ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯ ಬಹುದಾದ ಪಾಪ ಕೃತ್ಯಗಳ ಪ್ರಾಬಲ್ಯ, ಪ್ರಳಯ ಸಂಪತ್ತಿನ ವಿನಾಶ, ಘೋರ ವೈಪರಿತ್ಯಗಳು, ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ ಘಟನೆಗಳನ್ನು ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಅನೇಕ ಪವಾಡಗಳನ್ನು ಮಾಡಿದ್ದಾರೆ’ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಯ ಮ್ಯಾನೇಜರ್ ಸುರೇಶ್ ಹೊನ್ನಳ್ಳಿ , ನೈಮಲ್ಯ ವಿಭಾಗದ ಅಧಿಕಾರಿ ಆರೀಪ್ ಹುನ್ನಿಸಾ ಬೇಗಂ, ಸಮುದಾಯ ಸಂಘಟನಾ ವಿಭಾಗದ ಚನ್ನಮ್ಮ ದಳವಾಯಿ ಮಠ , ನಿಸಾರ್ ಅಹಮದ್,ಜಿಲಾನಿ ಪಾಶ , ಸಂಗೀತ ಗಾಯಕರಾದ ಯಂಕಣ್ಣ ದೇಶಪಾಂಡೆ, ಬಸವರಾಜ ಮೇಟಿ, ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ