ಮುದಗಲ್ಲ ವರದಿ..
ಶರಣರ ತತ್ವ ಪಾಲನೆಯಿಂದ ಬದುಕು ಆದರ್ಶಪ್ರಾಯ: ಅಭಿನವ ಚನ್ನಬಸವ ಶಿವಾಚಾಯ೯ರು..

ಮುದಗಲ್ಲ :- ಪಟ್ಟಣದ ಕಿಲ್ಲಾದಲ್ಲಿನ ಐತಿಹಾಸಿಕ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಶೈಲ ಪಾದಯಾತ್ರಿಗಳ ದಾಸೋಹ ಜಾತ್ರೆ ನಿಮಿತ್ತ ಆಯೋಜಿಸಿದ್ದ ಶರಣರ ಜೀವನ ದಶ೯ನ ಪ್ರವಚನ ಮಂಗಳವಾರ ಸಂಜೆ ಪ್ರವಚನದಲ್ಲಿ ವಚನ ದರ್ಶನ ಶರಣ ಪರಂಪರೆ ಯಾಗಿದ್ದು, 12ನೇ ಶತನಾಮನ ದಿಂದಲು ನಡೆದು ಕೊಂಡು ಬಂದಿದೆ.
ವಚನ ಪರಂಪರೆ ಅರಿತ ಕೋಟಿಗಟ್ಟಲೇ ಜನರಲ್ಲಿ ಭಾಗಶಃ ಜನರು ಜೀವನದಲ್ಲಿ ಅಳವಡಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರವಚನ ದಲ್ಲಿ ನಂದವಾಡಿಗಿ ಪೂಜ್ಯರಾದ ಅಭಿನವ ಚನ್ನಬಸವ ಶಿವಾಚರ್ ಯರು ಪ್ರವಚನ ದಲ್ಲಿ ವಿಷಾದ ವ್ಯಕ್ತಪಡಿಸಿದರು. ಆಧುನಿಕತೆ ಭರಾಟೆಯಲ್ಲಿ ಸಂಸ್ಕೃತಿ ಮರೆಯುತ್ತಿದ್ದೆವೆ. ಇತ್ತೀಚಿನ ದಿನಗಳಲ್ಲಿ ಪುರಾಣ,ಪ್ರವಚನ ಕಾರ್ಯಕ್ರಮಗಳು ಕೇವಲ ಕಥೆ, ಹಾಸ್ಯಕ್ಕೆ ಸೀಮಿತವಾಗಿರುವುದು ರೂಢಿಗತವಾಗಿದೆ.

‘ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು’ ಎನ್ನುವ ಸರ್ವಜ್ಞರ ನುಡಿಯಂತೆ ಇಲ್ಲಿನ ದೇವಸ್ಥಾನ ದ ಭಕ್ತರು ಸುಮಾರು ವಷ೯ಗಳಿಂದ ಶ್ರೀಶೈಲ ಯಾತ್ರಿಕರಿಗೆ ದಾಸೋಹ ಸೇವಾ ಮಾಡುತ್ತಿದ್ದಾರೆ ಅನ್ನ ಮತ್ತು ಅಕ್ಷರ ದಾಸೋಹ ಮೂಲಕ ದೇಹದ ಒಳಗೂ, ಹೊರಗೂ ದಾಸೋಹ ಬಡಿಸಿದ ಬಸವಾದಿ ಶರಣರ ತತ್ವ ಚಿಂತನೆಯನ್ನು ಮಂಥನ ಮಾಡಿಕೊಂಡಾಗ ಬದುಕು ಆದರ್ಶಪ್ರಾಯವಾಗಲಿದೆ ವಿಜಯಪುರ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರಿ ಮಾಡುತ್ತಾರೆ. ಅವರಿಗೆ ತೊಂದರೆ ಆಗದಂತೆ ದಾಸೋಹ ಮತ್ತು ಇತರ ವ್ಯವಸ್ಥೆ ಮಾಡಲುಯುವಕರು ತಂಡೋಪತಂಡವಾಗಿ ಭಾಗಿಯಾಗಬೇಕು ಎಂದರು
ಮಠ, ಮಂದಿರಗಳಲ್ಲಿ ಮಾನವನ ಉದ್ಧಾರಕ್ಕೆ ಪುರಾಣ, ಪ್ರವಚನ ಸತ್ಕಾರ್ಯಗಳು ನಡೆಯುತ್ತಿವೆ. ದೇವಸ್ಥಾನಗಳು ಆಧ್ಯಾತ್ಮಿಕ ಭಕ್ತಿಯ ಚಿಂತನೆಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿಯ ಚಿಕಿತ್ಸೆ ನೀಡುವ ಪವಿತ್ರ ತಾಣಗಳಾಗಿವೆ. ಸಾಮಾಜಿಕ ಬದಲಾವಣೆಯಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ. ಪ್ರೀತಿ, ವಿಶ್ವಾಸ, ನಂಬಿಕೆಯ ತಳಹದಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಪರಸ್ಪರ ಪ್ರೀತಿಯಿಂದ ಸಮಾಜಕ್ಕೆ ಒಳ್ಳೆಯ ಸನ್ಮಾರ್ಗ ತೋರಬೇಕು. ಒತ್ತಡದಲ್ಲಿ ಬದುಕುತ್ತಿರುವ ನಾವು ನೆಮ್ಮದಿಯೆಡೆಗೆ ಸಾಗಬೇಕು. ಸಂಸಾರದಲ್ಲಿ ಸಾಮರಸ್ಯ ಇರಲಿ.ದ್ವೇಷ ದ್ವೇಷದಿಂದ ಮುಕ್ತವಾಗುವುದಿಲ್ಲ. ಪ್ರೀತಿಯಿಂದ ಮಾತ್ರ ಮಾತಿಗೆ ಕಡಿವಾಣ ಹಾಕಿ ಕುಟುಂಬ ವ್ಯವಸ್ಥೆಯನ್ನು ವಿರಸದಿಂದ ಪಾರು ಮಾಡಬೇಕು ಎಂದು ಸಲಹೆ ನೀಡಿದರು.಼
ದಾಸೋಹಂ’ ಎಂದರೆ ಹಮ್ಮು, ಬಿಮ್ಮು ತೊರೆದು ಇರುವುದರಲ್ಲಿ ಹಂಚಿ ತಪ್ತಿಪಡುವುದಾಗಿದೆ. ಶರಣರು ‘ಸ್ವ ಅಹಂ ಎಂದೆನಿಸದೇ ದಾಸೋಹಂ ಎನಿಸಯ್ಯ’ ಎಂಬ ಮಾತಿನಂತೆ ನಾನು, ನನ್ನದು ಎಂಬ ಅಹಂಕಾರ ತೊರೆದು ಬದುಕುವುದೇ ದಾಸೋಹಂ ತತ್ವ ಎಂದು ಶರಣರು ತಿಳಿಸಿಕೊಟ್ಟಿದ್ದಾರೆ.ಬೇಡಿದ ಮನಸ್ಸುಗಳಿಗೆ ಬೇಡಿದ್ದನ್ನು ನೀಡುವುದು ಮತ್ತು ಎದುರಿನ ವ್ಯಕ್ತಿಯನ್ನು ಕಂಡೊಡನೆ ಆತನ ಹಸಿವಿನ ಬಗ್ಗೆ ಅರಿವು ಮೂಡುವುದು ದಾಸೋಹವಾಗಿದೆ. ಭಾವಸೂಕ್ಷ್ಮತೆ ಮತ್ತು ಸಂವೇದನಾಶೀಲತೆ ದಾಸೋಹದ ಮೂಲ ತತ್ವವೂ ಆಗಿದೆ ಎಂದರು
ಈ ಸಂದರ್ಭದಲ್ಲಿ ದೇವಸ್ಥಾನ ನ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ್ ಅದಾಪೂರ ಲಿಂಗಪ್ಪ ಹಣಗಿ ಶಿವಾನಂದ ಸುಂಕದ , ಮಹೇಶ ಸ್ವಾಮಿ ವಸ್ತ್ರದ ,.ಉದಯ ಕುಮ್ಮಾರ್ , ಅನಿಲ್ ಕುಮಾರ್ , ವಿಶ್ವನಾಥ ದೇಸಾಯಿ, ಹಾಗೂ ಸಂಗೀತಗಾರರರು ಹಾಗೂ ದೇವಸ್ಥಾನ ನ ಭಕ್ತರು ಹಾಗೂ ಪಟ್ಟಣದ ಜನರು ಆಗಮಿಸಿ ಪಾಲ್ಗೊಂಡಿದ್ದರು.
ವರದಿ:- ಮಂಜುನಾಥ ಕುಂಬಾರ