Post Views: 15
BIG NEWS : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ : ರಾಜ್ಯದ ಟಾಪರ್ ಮಾಹಿತಿ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಪ್ರಜಾವೀಕ್ಷಣೆ ಡಿಜಿಟಲ್ ಡಸ್ಕ್, ಏ. 09 : ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಹೀಗೆ ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗ :- ಇಬ್ಬರಿಗೆ 600ಕ್ಕೆ 600 ಅಂಕ!, ವಾಣಿಜ್ಯ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿರುವ ಬೆಂಗಳೂರಿನ ಜೈನ್ ಪಿಯು ಕಾಲೇಜಿನ ಅದಿತಿ ಎ ಬಾಪು ಮತ್ತು ದಕ್ಷಿಣ ಕನ್ನಡದ ಆಳ್ವಾಸ್ ಪಿಯು ಕಾಲೇಜಿನ ದಿಶಾ, ಒಟ್ಟು 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಬೆಳಗಾವಿಯ ಗೋಗ್ಟೆ ವಾಣಿಜ್ಯ ಪಿಯು ಕಾಲೇಜಿನ ಧ್ವನಿ ಸಂತೋಷ್ ಕುಲಕರ್ಣಿ ಹಾಗೂ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರಾಚೆಲ್ ಡಿಸೋಜಾ 599 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ವಿಜ್ಞಾನ ವಿಭಾಗ :- ಮಂಗಳೂರಿನ ಪಾರುಪತ್ಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ‘ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ’ ಪ್ರಿಸ್ಸಿಲ್ಲಾ ಕಾರ್ಡೋಜಾ 599 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ಅಭಿರಾಮ್ ವಿ ಭಟ್, ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ಏಂಜೆಲ್ ತಿವಾರಿ ಸೇರಿದಂತೆ ಹಲವು ವಿದ್ಯಾರ್ಥಿಗಳು 598 ಅಂಕಗಳನ್ನು ಪಡೆದು ಜಂಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ :- ಗ್ರಾಮೀಣ ಪ್ರತಿಭೆಗಳ ಮಿನುಗು ಕಲಾ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ತಾಲೂಕಿನ ಮಂಗಳೂರು ಗ್ರಾಮದ ಸಂಗೀತಾ ಪೋಲಿಸ್ ಪಾಟೀಲ್, ಬಳ್ಳಾರಿಯ ಇಂದು ಸ್ವತಂತ್ರ ಪಿಯು ಕಾಲೇಜಿನ ಅರ್ಚನಾ ಡಿ ಎಂ ಹಾಗೆಯೇ ಕಲಬುರಗಿಯ ಎಸ್.ಎಂ.ಟಿ ವಿ.ಜಿ ಪಿಯು ಕಾಲೇಜಿನ ಶೃಷ್ಠಿ ಅವರು ತಲಾ 598 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.
ಈ ವಿಭಾಗದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಧನೆ ಎದ್ದು ಕಾಣುತ್ತಿದೆ ಎನ್ನಬಹುದು.