You are currently viewing ಮುದಗಲ್ಲ :- ಡಾ!! ಬಿ‌.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಪುರಸಭೆ ಹಾಗೂ ನಾಡ ಕಛೇರಿಯಲ್ಲಿ ಅದ್ದೂರಿಯಾಗಿ ಆಚರಣೆ…

ಮುದಗಲ್ಲ :- ಡಾ!! ಬಿ‌.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಪುರಸಭೆ ಹಾಗೂ ನಾಡ ಕಛೇರಿಯಲ್ಲಿ ಅದ್ದೂರಿಯಾಗಿ ಆಚರಣೆ…

ಮುದಗಲ್ಲ ವರದಿ..

ಮುದಗಲ್ಲ :-ಡಾ!! ಬಿ‌.ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಪುರಸಭೆ ಹಾಗೂ ನಾಡ ಕಛೇರಿಯಲ್ಲಿ ಅದ್ದೂರಿಯಾಗಿ ಆಚರಣೆ…

ಮುದಗಲ್ಲ :- ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಪುರಸಭೆ , ನಾಡ ಕಛೇರಿ ಅದ್ದೂರಿ ಯಾಗಿ ಜಯಂತಿ ಯನ್ನು  ಆಚರಿಸಲಾಯಿತು.
ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಸಭೆ ಯಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಹಾಗೂ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್  ರ್ತುಳಜಾರಾಮ ಸಿಂಗ್ ಅವರು  ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಸೂರ ತಾಲೂಕಿನ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಅವರು ಮಾತನಾಡಿದ್ದರು  ವಿವಿಧ ಸಂಸ್ಕೃತಿ, ಧರ್ಮದವರು ನೆಲೆಸಿರುವ ಭಾರತ ದೇಶಕ್ಕೆ ಸಮರ್ಥವಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ’ ಎಂದು ಹೇಳಿದರು.
ನಂತರ ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ತುಲುಜಾ ರಾಮ್  ಸಿಂಗ್ ಮಾತನಾಡಿದ್ದರು ಅಂಬೇಡ್ಕರ್ ದೇಶದ ಆಸ್ತಿ. ಅವರ ಮಾದರಿ ಬದುಕು, ತತ್ವ, ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ಪುರಸಭೆ ಯಲ್ಲಿ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ಅವರು ಮಾತನಾಡಿ, `ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮಾನವತಾವಾದಿ’ ಎಂದು ಬಣ್ಣಿಸಿದರು

ಈ ಸಂದರ್ಭದಲ್ಲಿ ಪುರಸಭೆ ಯಲ್ಲಿ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ , ನಾಡ ಕಛೇರಿಯಲ್ಲಿ ಉಪ ತಹಶೀಲ್ದಾರ್ ತುಲುಜಾ ರಾಮ್ ಸಿಂಗ್ , ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಮುಖಂಡರಾದ ದುರಗಪ್ಪ ಕಟ್ಟಿಮನಿ (ಮಾಜಿ ಪುರಸಭೆ ಸದಸ್ಯ ) ಗುಂಡಪ್ಪ ಗಂಗಾವತಿ , ವೆಂಕಟೇಶ್ ಹಿರೇಮನಿ , ಬಸವರಾಜ ಬಂಕದಮನಿ, ನಾಗರಾಜ ತಳವಾರ, ಹುಲಗಪ್ಪ ಚಲುವಾದಿ, ರಘವೀರ್ ಚಲುವಾದಿ, ರವಿ ಕಟ್ಟಿಮನಿ, ಸಣ್ಣ ಸಿದ್ದಯ್ಯಾ , ಬಸವರಾಜ ಹಾವಳಿ,ಕೃಷ್ಣ ಚಲುವಾದಿ , ಸತೀಶ್ ಭೋವಿ,ಮೋಹನ ಬಂಡಾರಿ,  ಸುರೇಶ್ ಬಂಡಾರಿ, ಮೈಬುಸಾಬ ಕಡ್ಡಿ ಪುಡಿ, ಸಾಬು ಹುಸೇನ್,  ಗಾಯಕರಾದ ಯಂಕಣ್ಣ ದೇಶಪಾಂಡೆ , ಇತರರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!