You are currently viewing Exclusive : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಮಹನೀಯರ ಭಾವಚಿತ್ರಕ್ಕೆ ಸೆಗಣಿ ಎರಚಿ ಅಪಮಾನ: ಬುಗಿಲೆದ್ದ ಆಕ್ರೋಶ!

Exclusive : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಮಹನೀಯರ ಭಾವಚಿತ್ರಕ್ಕೆ ಸೆಗಣಿ ಎರಚಿ ಅಪಮಾನ: ಬುಗಿಲೆದ್ದ ಆಕ್ರೋಶ!

BREAKING : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಮಹನೀಯರ ಭಾವಚಿತ್ರಕ್ಕೆ ಸೆಗಣಿ ಎರಚಿ ಅಪಮಾನ: ಬುಗಿಲೆದ್ದ ಆಕ್ರೋಶ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು, ಏಪ್ರಿಲ್ 16 : ತಾಲೂಕಿನ ವಿರಾಪುರ ಗ್ರಾಮದಲ್ಲಿ ದೇಶದ ಅಸ್ಮಿತೆ ಹಾಗೂ ಸಾಮಾಜಿಕ ನ್ಯಾಯದ ಸಂಕೇತವಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇತರೆ ಮಹನೀಯರ ಭಾವಚಿತ್ರಗಳಿಗೆ ಕಿಡಿಗೇಡಿಗಳು ಸಗಣಿ ಎರಚಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.

ಈ ಕೃತ್ಯದಿಂದಾಗಿ ಗ್ರಾಮಸ್ಥರಲ್ಲಿ ಮತ್ತು ವಿವಿಧ ಸಂಘಟನೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಇಂದು ಮುಂಜಾನೆ ಸಾರ್ವಜನಿಕರು ಎಂದಿನಂತೆ ಓಡಾಡುವಾಗ ಮಹನೀಯರ ಭಾವಚಿತ್ರಗಳ ಮೇಲೆ ಸಗಣಿ ಮೆತ್ತಿರುವುದು ಕಂಡುಬಂದಿದೆ. ಈ ಹೀನ ಕೃತ್ಯವು ತಡರಾತ್ರಿ ನಡೆದಿದೆ ಎಂದು ಶಂಕಿಸಲಾಗಿದೆ. ಶಾಂತಿ ಮತ್ತು ಸೌಹಾರ್ದತೆಯಿಂದ ಇರುವ ಸಮಾಜದಲ್ಲಿ ಸಂಘರ್ಷ ಉಂಟುಮಾಡುವ ಉದ್ದೇಶದಿಂದಲೇ ಕಿಡಿಗೇಡಿಗಳು ಈ ರೀತಿಯ ದುಷ್ಕೃತ್ಯ ಎಸಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರತಿಭಟನೆ ಮತ್ತು ಆಗ್ರಹ : ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಲಿತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಮಹನೀಯರು ಕೇವಲ ಒಂದು ಜಾತಿಗೆ ಅಥವಾ ವರ್ಗಕ್ಕೆ ಸೀಮಿತರಾದವರಲ್ಲ, ಇಡೀ ದೇಶದ ಆಸ್ತಿ. ಅವರ ಭಾವಚಿತ್ರಕ್ಕೆ ಮಾಡುವ ಅವಮಾನವು ಇಡೀ ಸಂವಿಧಾನ ಮತ್ತು ದೇಶಕ್ಕೆ ಮಾಡಿದ ಅಪಮಾನ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳದಲ್ಲಿ ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆ ಶಿರೂರು, ತಾಲೂಕಾ ಪಂಚಾಯತಿ ಇಒ ಸಂತೋಷ ಪಾಟೀಲ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಸಿಪಿಐ ಮೌನೇಶ್ವರ ಪಾಟೀಲ್, ಕುಕನೂರು ಠಾಣೆಯ ಪಿಎಸ್ಐ ಎಸ್‌ಪಿ ನಾಯ್ಕ್ ಅವರು ಬೀಡು ಬಿಟ್ಟಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ವರದಿ : ಚಂದ್ರು ಆರ್ ಭಾನಾಪುರ್ 

Leave a Reply

error: Content is protected !!