You are currently viewing ಮುದಗಲ್ಲ :-ಉಚಿತ ಸಾಮೂಹಿಕ ಖತ್ನ (ಮುಂಜಿ) ಕಾರ್ಯಕ್ರಮಗಳು ಬಡ ಮುಸ್ಲಿಂ ಸಮುದಾಯದ ಜನರ ಪಾಲಿಗೆ ವರದಾನ:- ಎಸ್ ಆರ್ ರಸೂಲ್..

ಮುದಗಲ್ಲ :-ಉಚಿತ ಸಾಮೂಹಿಕ ಖತ್ನ (ಮುಂಜಿ) ಕಾರ್ಯಕ್ರಮಗಳು ಬಡ ಮುಸ್ಲಿಂ ಸಮುದಾಯದ ಜನರ ಪಾಲಿಗೆ ವರದಾನ:- ಎಸ್ ಆರ್ ರಸೂಲ್..

ಮುದಗಲ್ಲ ವರದಿ

ಉಚಿತ ಸಾಮೂಹಿಕ ಖತ್ನ (ಮುಂಜಿ) ಕಾರ್ಯಕ್ರಮಗಳು ಬಡ ಮುಸ್ಲಿಂ ಸಮುದಾಯದ ಜನರ ಪಾಲಿಗೆ ವರದಾನ:- ಎಸ್ ಆರ್ ರಸೂಲ್..

ಮುದಗಲ್ಲ :-ಪಟ್ಟಣದ ಕಿಲ್ಲಾದಲ್ಲಿ ಕಲ್ಯಾಣ ಕರ್ನಾಟಕ ದರ್ವೆಸು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾಮೂಹಿಕ ಖತ್ನಾ (ಮುಂಜಿವೆ) ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಯ ಮಾಜಿ ಸದಸ್ಯ ರಾದ ಎಸ್ ಆರ್ ರಸೂಲ್ ಸಾಬ್ ಸಾಮೂಹಿಕ ಮುಂಜಿ ಕಾರ್ಯಕ್ರಮಗಳು ಬಡ ಮುಸ್ಲಿಂ ಸಮುದಾಯದ ಜನರ ಪಾಲಿಗೆ ವರದಾನವಾಗಿವೆ ಎಂದು
ಎಂದು ಹೇಳಿದರು 2ನೇ ವಷ೯ದ
ಸಾಮೂಹಿಕ ಉಚಿತ ಮುಂಜಿ(ಖತ್ನಾ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸಂಘಗಳು ಈ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುವ ಮೂಲಕ ಸರಕಾರದೊಂದಿಗೆ ಬಡ ಜನರ ಶ್ರೇಯಸ್ಸಿಗೆ ಶ್ರಮಿಸಬೇಕು ಎಂದರು.

ಕಲ್ಯಾಣ ಕರ್ನಾಟಕ ದರ್ವೆಸು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಿರಂತರವಾಗಿ ಸಮಾಜಿಕ ಕಾಯ೯ಕ್ರಮ ನಡೆಸಿಕೊಂಡು ಬರುತ್ತಿದ್ದು ಮುಂಜಿ ಕಾಯ೯ಕ್ರಮ ಮಹತ್ವದ ಕಾಯ೯ವಾಗಿದೆ ಎಂದರು ಜನಪ್ರಿಯ ವೈದ್ಯರಿಂದ ನಡೆದ ಮುಂಜಿ ಕಾಯ೯ಕ್ರಮದಲ್ಲಿ ಶಿಬಿರದಲ್ಲಿ 250 ಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದರು

ಈ ಸಂದರ್ಭದಲ್ಲಿಧರ್ಮ ಗುರು ಜಮೀರ ಅಹ್ಮದ ಖಾಜಿ, ಪುರಸಭೆ ಸದಸ್ಯರಾದ ಅಮೀರಬೇಗ್ ಉಸ್ತಾದ, ಎಸ್.ಆರ್. ರಸೂಲ, ಪತ್ರಕರ್ತ ರಾಘವೇಂದ್ರ ಗುಮಾಸ್ತಿ, ಕಲ್ಯಾಣ ಕರ್ನಾಟಕ ದರ್ವೇಶ ಸಂಘದ ಜಿಲ್ಲಾಧ್ಯಕ್ಷ ರಹಿಂಶಾ ಮಕಾನ್‌ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹಿಯುದ್ದೀನ್ ಭಂಡಾರಿ, ಜನಪ್ರಿಯ ಡಾಕ್ಟರ್ ಗಳು. ಸೇರಿದಂತೆ ಮುಂತಾದ ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕುಂಬಾರ

 

Leave a Reply

error: Content is protected !!