ನಾಳೆ ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ  ಬಿಜೆಪಿ ಕಾಂಗ್ರೆಸ್ ನಡುವೆ ಪೈಪೋಟಿ..

ಮುದಗಲ್ಲ ವರದಿ..

ನಾಳೆ ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆ  ಬಿಜೆಪಿ ಕಾಂಗ್ರೆಸ್ ನಡುವೆ ಪೈಪೋಟಿ..

ಮುದಗಲ್ಲ:-  ವಿಧಾನ ಪರಿಷತ್ತಿನ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ನಾಳೆ ಬೆಳಿಗ್ಗೆ 8 ರಿಂದ ಸಂಜೆ 4 ವರೆಗೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.

ಬಿಜೆಪಿ ಅಭ್ಯರ್ಥಿ ಐದನೇ ಗೆಲುವಿಗೆ,

ಕಾಂಗ್ರೆಸ್ ಅಭ್ಯರ್ಥಿ ಎರಡನೇ ಗೆಲುವಿಗೆ ಯತ್ನ

 13 ಜನ ಕಣದಲ್ಲಿ

 ಅ.27 ಮತಗಳ ಎಣಿಕೆ ಕಲ್ಬುರ್ಗಿಯಲ್ಲಿ

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶಶೀಲ್ ಜಿ. ನಮೋಶಿ ಅವರು ಈ ಕ್ಷೇತ್ರದಿಂದ 1996, 2002, 2008 ಮತ್ತು 2020 ಸೇರಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಈಗ ಐದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2014ರಲ್ಲಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ ಅವರು ಶಶೀಲ್ ನಮೋಶಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.ಈಗ ಅವರು ಎರಡನೇ ಬಾರಿಗೆ ಆಯ್ಕೆ ಬಯಸಿದ್ದಾರೆ

ಶಶೀಲ್ ಜಿ. ನಮೋಶಿ ಮತ್ತು ಕಾಂಗ್ರೆಸ್ ನಶರಣಪ್ಪ ಮಟ್ಟೂರ ಅಲ್ಲದೆ ಸಾಯಿಬಣ್ಣ ಜಮಾದಾರ ಆಮ್ ಆದ್ಮಿ ಪಕ್ಷದಿಂದ,ಶಂಕರರೆಡ್ಡಿ ಪಾಟೀಲ ಜನತಾ ದಳ (ಯುನೈಟೆಡ್) ನಿಂದ ಹಾಗು 9 ಜನರು ಪಕ್ಷೇತರರಾಗಿ ಒಟ್ಟಾರೆ  13 ಜನ ಕಣದಲ್ಲಿದ್ದಾರೆ.

ಮತ ಎಣಿಕೆ: ಅಕ್ಟೋಬರ್ 27 ರಂದು ಕಲ್ಬುರ್ಗಿಯಲ್ಲಿ ನಡೆಯಲಿ

ಕಲ್ಯಾಣ ಕರ್ನಾಟಕದ  ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ವರದಿ ::-ಮಂಜುನಾಥ ಕುಂಬಾರ 

 

Prajavikshane

Chandru R Bhanapaur

Leave a Reply

error: Content is protected !!