ಕೊಪ್ಪಳ : ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಜನತೆಗೆ ಕೇಂದ್ರ ರೈಲ್ವೆ ಇಲಾಖೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದೆ. ಗದಗ್ ವರೆಗೂ ಮಾತ್ರ ಸಂಚಾರಿಸುತ್ತಿದ್ದ ಮುಂಬೈ ಗದಗ್ ಎಕ್ಸ್ ಪ್ರೆಸ್ ರೈಲು ವಿಜಯನಗರ ಜಿಲ್ಲೆಯ ಹೊಸಪೇಟೆ ವರೆಗೂ ವಿಸ್ತರಣೆ ಅಗಲಿದ್ದು ಶೀಘ್ರದಲ್ಲಿ ಸಂಚಾರ ಪ್ರಾರಂಭಿಸಲಿದೆ.
ಸೋಲಾಪುರ್ ಗದಗ್ ಎಕ್ಸ್ ಪ್ರೆಸ್ ರೈಲನ್ನು ಹೊಸಪೇಟೆ ಜಂಕ್ಷನ್ ವರೆಗೂ ವಿಸ್ತರಣೆ ಮಾಡಿ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ಕೊಟ್ಟಿದ್ದು ಮುಂಬೈ ಗದಗ್ ರೈಲು ಶೀಘ್ರದಲ್ಲಿ ಹೊಸಪೇಟೆ ವರೆಗೂ ಸಂಚಾರ ಮಾಡಲಿದೆ.
ಇದರಿಂದಾಗಿ ವಿಜಯನಗರ, ಕೊಪ್ಪಳ ಜಿಲ್ಲೆಯ ಜನತೆಗೆ ವ್ಯಾಪಾರ, ವಹಿವಾಟು, ಇತರ ಚಟುವಟಿಕೆಗೆ ಮುಂಬೈ ಸಿಟಿ ಮುಂದಿನ ದಿನಗಳಲ್ಲಿ ಇನ್ನೂ ಹತ್ತಿರವಾಗಲಿದೆ.