ಕೊಪ್ಪಳ : ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ (PMGSY-ಪಿ.ಎಂ.ಜಿ.ಎಸ್.ವೈ)ಯಡಿಯಲ್ಲಿ ಕಾಮಗಾರಿಗಳ ಪರಿವೀಕ್ಷಣೆಯನ್ನು ಆಗಸ್ಟ್ 24ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದೆ.
ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಬ್ಯಾಚ್-1 & ಬ್ಯಾಚ್-2 ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳು ಹಾಗೂ ನಿರ್ವಹಣೆ ಹಂತದಲ್ಲಿರುವ ಕಾಮಗಾರಿಗಳನ್ನು ರಜಾಕ ರಾಷ್ಟ್ರೀಯ ಗುಣನಿಯಂತ್ರಣಾಧಿಕಾರಿಗಳಾದ (ಎನ್.ಕ್ಯೂ.ಎಂ) ಅವದೇಶ ಕುಮಾರ ಅವರು ಆಗಸ್ಟ್ 21ರಿಂದ 24ರವರೆಗೆ ಪರಿವೀಕ್ಷಣೆ ಕೈಗೊಳ್ಳಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08539-231054 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.