ಕುಕನೂರು :ಪಟ್ಟಣದ ಆರಾಧ್ಯ ದೇವತೆ, ಕರುಣಾಮಯಿ, ಭಾಗ್ಯಗಳ ವಿಧಾತೆ ತಾಯಿ ಮಹಾಮಾಯ ದೇವಿಯ ರಥೋತ್ಸವವು ಸೋಮವಾರ ಅದ್ದೂರಿಯಾಗಿ ಜರುಗಿತು.
ನವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ೯ ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳು ನಡೆದು ಇಂದು ಆಯುಧ ಪೂಜೆಯ ಪ್ರಯುಕ್ತ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆಡೆಯಿತು.
ಮಹಾಮಾಯೆಯ ರಥೋತ್ಸವಕ್ಕೆ ಕುಕನೂರು ತಾಲೂಕ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು. ರಥೋತ್ಸವಕ್ಕೆ ಸರಿಯಾಗಿ ಮೂರು ಗಂಟೆ ೩೦ ನಿಮಿಷಕ್ಕೆ ಮೂಲಾ ನಕ್ಷತ್ರದಲ್ಲಿ ಚಾಲನೆ ದೊರೆಯಿತು.
ಸಾವಿರಾರು ಭಕ್ತರು ಉದೋ ಉದೋ ಎನ್ನುವ ಘೋಷ ವಾಕ್ಯದ ಮೂಲಕ 500 ಮೀಟರ್‌ಗೂ ಹೆಚ್ಚು ದೂರ ರಥೋತ್ಸವವನ್ನು ಎಳೆದರು. ರಥೋತ್ಸವಕ್ಕೆ ಉತ್ತತ್ತಿ ಬಾಳೆ ಹಣ್ಣನ್ನು ಅರ್ಪಿಸಿ ಭಕ್ತರು ತಮ್ಮ ಭಕ್ತಿಯನ್ನು ಮೆರೆದರು.
ಅದ್ದೂರಿಯಾಗಿ ಜರುಗಿದ ಕುಕನೂರು ಮಹಾಮಾಯೆಯ (ದ್ಯಾಮವ್ವ) ರಥೋತ್ಸವ
