Local : 200ನೇ ಕಿತ್ತೂರು ರಾಣಿ ಚನ್ನಮ್ಮರ ಜಯಂತೋತ್ಸವ ಆಚರಣೆ 

You are currently viewing Local : 200ನೇ ಕಿತ್ತೂರು ರಾಣಿ ಚನ್ನಮ್ಮರ ಜಯಂತೋತ್ಸವ ಆಚರಣೆ 
* ಪಟ್ಟಣದ ತಹಶೀಲ್ದಾರ್ ಕಛೇರಿ ಹಾಗೂ ಕಿತ್ತೂರು ಚನ್ನಮ್ಮರ ವೃತ್ತದಲ್ಲಿ ಜಯಂತಿ ಆಚರಣೆ.
 * ತಾಲೂಕ ಆಡಳಿತ ಹಾಗೂ ಪಂಚಮಶಾಲಿ ಸಮಾಜದಿಂದ ಜಯಂತಿ ಆಚರಣೆ .
ಕುಕನೂರು   : ಪಟ್ಟಣ ತಹಶೀಲ್ದಾರ್ ಕಾರ್ಯಲಯದಲ್ಲಿ ರವಿವಾರ ತಹಶೀಲ್ದಾರ್ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮರ 200ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಜಯಂತೋತ್ಸವದ ಪ್ರಯುಕ್ತ ಚನ್ನಮ್ಮರ ಭಾವಚಿತ್ರಕ್ಕೆ ಪಂಚಮಶಾಲಿ ಸಮಾಜದ ಮುಖಂಡರ ಜೊತೆ ಪೂಜೆ ಸಲ್ಲಿಸಲಾಯಿತು.
ಬಳಿಕ ತಹಶೀಲ್ದಾರ್ ಎಚ್ ಪ್ರಾಣೇಶ್ ಮಾತನಾಡಿ ಸ್ವಾತಂತ್ರö್ಯ ಹೋರಾಟದ ಕಿಚ್ಚನ್ನು ಹಚ್ಚಿದ ಧೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮ, ಚನ್ನಮ್ಮ ಧೈರ್ಯ, ಸಾಹಸ ಹಾಗೂ ಅವರ ದೇಶ ಭಕ್ತಿ ಇಂದಿನ ಯುವ ಪೀಳಿಗೆ ಆದರ್ಶವಾಗಿದೆ ಎಂದರು.
ಪಟ್ಟಣ ಪಂಚಾಯತಿ ಹತ್ತಿರ ಇರುವ ಕಿತ್ತೂರು ರಾಣಿ ಚನ್ನಮ್ಮರ ವೃತ್ತದಲ್ಲಿ ಪಂಚಮಶಾಲಿ ಸಮಾಜದ ವತಿಯಿಂದ ಚನ್ನಮ್ಮರ ನಾಮಫಲಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮಶಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಬಸನಗೌಡ ತೊಂಡಿಹಾಳ, ತಾಲೂಕ ಅಧ್ಯಕ್ಷ ಈರಣ್ಣ ಅಣ್ಣಿಗೇರಿ, ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಕೂಡ್ಲೂರು, ಗೆದಿಗೆಪ್ಪ ಪವಾಡಶೆಟ್ಟಿ, ಮಂಜು ಕುಕನೂರು, ಗುದ್ನೇಪ್ಪ ಯತ್ನಟ್ಟಿ, ಚಂದ್ರು ಬಗನಾಳ, ಈಶಪ್ಪ ಆರೇರ, ಶರಣಪ್ಪಗೌಡ ಪಾಟೀಲ, ರಾಮನಗೌಡ, ಶಿವನಗೌಡ ಗೌಡ್ರ ಜಿಸಿಬಿ, ಗೀರಿಶ ಹಾಗೂ ಸಮಾಜ ಅನೇಕ ಹಿರಿಯರು ಹಾಗೂ ಯುವಕರು ಇದ್ದರು.

Leave a Reply

error: Content is protected !!