Local news : ಶನಿವಾರ, ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಭಾಗಿ

You are currently viewing Local news : ಶನಿವಾರ, ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಶಾಸಕ ಬಸವರಾಜ್ ರಾಯರಡ್ಡಿ ಭಾಗಿ
ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ

ಶನಿವಾರ, ಭಾನುವಾರ ವಿವಿಧ ಕಾರ್ಯಕ್ರಮದಲ್ಲಿ ಶಾಸಕ ರಾಯರಡ್ಡಿ ಭಾಗಿ.

ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು : ಸಿ ಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ್ ರಾಯರಡ್ಡಿ ಅವರು ದಿನಾಂಕ 6 ಮತ್ತು 7 ರಂದು ಶನಿವಾರ, ಭಾನುವಾರ ಎರಡು ದಿನ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಸಿ ಎಂ ಅವರ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ್ ರಾಯರಡ್ಡಿ ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಯಲಬುರ್ಗಾ ತಾಲೂಕಿನ ಕಲ್ಲಭಾವಿ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ನಿಲೋಗಲ್ ತರಲಕಟ್ಟೆ ಕೆರೆಗೆ ಗಂಗಾ


ಪೂಜೆ, ಸಾರ್ವಜನಿಕ ಸಭೆ, ಮದ್ಯಾಹ್ನ 3 ಗಂಟೆಗೆ ಕುಕನೂರು ತಾಲೂಕಿನ ಮಂಗಳೂರು ನಲ್ಲಿ ಸಾರ್ವಜನಿಕ ಸಭೆ, ಅನಂತರ ಕುಕನೂರು, ಯಲಬುರ್ಗಾ ಪಟ್ಟಣ ಪಂಚಾಯತ್ ವತಿಯಿಂದ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಲಿದ್ದಾರೆ.

ದಿ.7 ಭಾನುವಾರ ದಂದು ಕುಕನೂರು ತಾಲೂಕಿನ ಭಾನಾಪುರದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕುಕನೂರು ಪಟ್ಟಣದ ಆರ್ ಡಿ ಸಿ ಸಿ ಬ್ಯಾಂಕ್ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಬಿ ಎಸ್ ಶಿವಮೂರ್ತಿ ಅವರು ಪ್ರವಾಸ ಕಾರ್ಯಕ್ರಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!