BIG NEWS : ಒಂದೇ ವೇದಿಕೆ ಮೇಲೆ ರಾಜಕೀಯ ಬದ್ಧ ವೈರಿಗಳು : ತೀವ್ರಗೊಂಡ ಪರೋಕ್ಷ ಮಾತುಕತೆ..!!

You are currently viewing BIG NEWS : ಒಂದೇ ವೇದಿಕೆ ಮೇಲೆ ರಾಜಕೀಯ ಬದ್ಧ ವೈರಿಗಳು : ತೀವ್ರಗೊಂಡ ಪರೋಕ್ಷ ಮಾತುಕತೆ..!!

ವರದಿ : ಚಂದ್ರು ಆರ್ ಭಾನಾಪೂರ್

ಕುಕನೂರು : ಹಾಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹಾಗೂ ಮಾಜಿ ಶಾಸಕ ಹಾಲಪ್ಪ ಆಚಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಜಕೀಯ ಅಚ್ಚರಿಗೆ ಕಾರಣವಾಯಿತು.

ಇಂದು ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಸಂಘದ ಕೇಂದ್ರದ ಕುಕನೂರು ಶಾಖೆಯ  ನೂತನ ಕಟ್ಟಡದ ಉದ್ಘಾಟನೆಯಲ್ಲಿ ಇಬ್ಬರು ರಾಜಕೀಯ ಬದ್ಧ ವೈರಿಗಳು ಕಾಣಿಸಿಕೊಂಡಿದ್ದು, ಬಹಳಷ್ಟು ಕುತೂಹಲ ಮೂಡಿಸಿತು.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉  LOCAL NEWS : ಹಾಲಿ-ಮಾಜಿ ಶಾಸಕರ ಮುಖಾಮುಖಿ ಭೇಟಿ : ಸರ್ಕಾರದ ಸುಗಮ ಆಡಳಿತಕ್ಕೆ ಸಹಕಾರಿ ಸಂಘಗಳ ಮಹತ್ವದ ಪಾತ್ರ : ಶಾಸಕ ರಾಯರೆಡ್ಡಿ 

ಇದೇ ವೇಳೆ ನೂತನ ಕಟ್ಟಡದ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಶಾಸಕ ರಾಯರೆಡ್ಡಿ, ‘ಇತ್ತೀಚಿನ ರಾಜಕೀಯ ವಾತಾವರಣದಲ್ಲಿ ವಾಮ ಮಾರ್ಗದ ರಾಜಕಾರಣ ನಡೆಯುತ್ತಿದೆ. ಇದು ಬಹಳ ಬೇಸರದ ಸಂಗತಿ, ಇದರ ಜೊತೆಗೆ ಜನರ ಸೇವೆಯ ಗುರಿ ಇಲ್ಲದೇ, ತಮ್ಮ ಸ್ವಾರ್ಥಕ್ಕೆ ಹಾಗೂ ತಮ್ಮ ವ್ಯವಹಾರಗಳ ರಕ್ಷಣೆಗಾಗಿ ಮಾತ್ರ ರಾಜಕೀಯ ರಂಗ ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ಪ್ರಜಾ ಪ್ರಭುತ್ವದ ಕಗ್ಗೋಲೆ ಆಗುತ್ತಿರುವುದು ನನ್ನ ಕಣ್ಣಿನಿಂದಲೇ ನೋಡುತ್ತಿದ್ದೇನೆ. ಈ ತರ ಆಗಬಾರದು. ಗಣಿ ಮಾಲಿಕರು, ವ್ಯವಾಹರಸ್ಥ ವ್ಯಕ್ತಿಗಳು, ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಿಕರು ರಾಜಕೀಯ ಪ್ರವೇಶ ಮಾಡುತ್ತಿದ್ದು, ಇಂತವರಿಂದಲೇ ಇಂದಿನ ರಾಜಕಾರಣ ಹಾಳಾಗಿದೆ’ ಎಂದು ರಾಯರೆಡ್ಡಿ ಅವರು ಮಾಜಿ ಶಾಸಕ ಹಾಲಪ್ಪ ಆಚಾರ್ ಅವರನ್ನೇ ಗುರಿಯಾಗಿಸಿ ಹೇಳಿದ್ದಾರೆ ಎಂದು ಕೆಲ ರಾಜಕೀಯ ವಿಶ್ಲೇಷಕರು ವಿವರಿಸಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ….👉 POLITICAL ROUND : ‘ಪ್ರಧಾನಿ ಮೋದಿ ಅವರು ಸುಳ್ಳು ಹಾಗೂ ಉಲ್ಟಾ ಹೊಡೆಯುವುದರಲ್ಲಿ ನಿಶ್ಚಿಮರು’, ಪರೋಕ್ಷವಾಗಿ ಮಾಜಿ ಶಾಸಕರಿಗೆ ರಾಯರೆಡ್ಡಿ ಟಾಂಗ್..!

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ‘ನಿಮ್ಮ ಅಧಿಕಾರ ಅವಧಿಯಲ್ಲಿ ಪ್ರಾರಂಭವಾದ ಸಿಂಗಟಾಲೂರು ಏತ ನೀರಾವರಿ‌ ಯೋಜನೆ ಇದುರೆಗಾದರೂ ಆರಂಭವಾಗಿಲ್ಲ. ಇದನ್ನು ಪೂರ್ಣಗೊಳಿಸಿ ಈ ಭಾಗದ ರೈತರ ಕೆರೆಗಳಿಗೆ ನೀರನ್ನು ವದಗಿಸುತ್ತೀರಾ ಎಂಬ ಭಾವನೆ ಇದೆ. ರಾಜಕಾರಣದಲ್ಲಿ ಪ್ರಮಾಣಿಕ ಪ್ರಯತ್ನದಿಂದ ಜನರಿಗೆ ಬೇಕಾದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದರೆ ಸಾಕಾಗುತ್ತದೆ. ಇದನ್ನು ಬಿಟ್ಟು ಬೇರೆದನ್ನು ಮಾಡುವುದು ಬೇಕಾಗಿಲ್ಲ, ನಿಮ್ಮಂತಹ ಅನುಭವಿ ರಾಜಕಾರಣಿಗಳನ್ನು ನಿಮ್ಮ ನಾಯಕರು ಅಲಕ್ಷ್ಯ ಮಾಡಿದ್ದು, ಈ ಕ್ಷೇತ್ರದ ಪ್ರಜೆಯಾಗಿ ನನಗೆ ಬಹಳ ಬೇಸರ ತಂದಿದೆ. ಇದೀಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹುದ್ದೆ ಸಿಕ್ಕಿದ್ದು, ಅಲ್ಪ ಮಟ್ಟಿಗೆ ಖುಷಿ ವಿಚಾರವೇ ಸರಿ, ನಿಮ್ಮ ಕಾರ್ಯಾವಧಿಯಲ್ಲಿ ಉತ್ತಮ ಕೆಲಸ ಆಗಲೇಂದು ಆಶಿಸುತ್ತೇನೆ ಎಂದು ಪರೋಕ್ಷವಾಗಿ ತೀರುಗೆಟು ನೀಡಿದರು.

Leave a Reply

error: Content is protected !!