ಕುಕನೂರು : ಪಟ್ಟಣದ ರಾಯರಡ್ಡಿ ಕಾಲೋನಿಯ ಮಾರುತೇಶ್ವರ ದೇವಸ್ಥಾನದಲ್ಲಿ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಇಂದು ಬುಧವಾರ ನಡೆಯಲಿದೆ.
ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಮೃತ ಹಸ್ತದಿಂದ ಮಾರುತೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ಪಟ್ಟಣದ ಅನ್ನದಾನಿಶ್ವರ ಮಠದ ಮಹದೇವ ಸ್ವಾಮೀಜಿಗಳು ದಿವ್ಯ ಉಪಸ್ಥಿತರಿರುವರು. ನಂತರ ಮಹಾಪ್ರಸಾದ ನಡೆಯಲಿದೆ.
ಯಲಬುರ್ಗಾ ರಸ್ತೆಯ ರಾಯರಡ್ಡಿ ಕಾಲೋನಿಯ ನಿರ್ಮಾಣವಾಗಿರುವ ನೂತನ ಮಾರುತೇಶ್ವರ ದೇವಸ್ಥಾನದ ಮೂರ್ತಿಯನ್ನು ಮಂಗಳವಾರ ಪೂರ್ಣ ಕುಂಭ ಮೇಳದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ವೀರಯ್ಯ ತೊಂಟದರ್ಯಮಠ, ಕರಬಸಯ್ಯ ಬೀನ್ನಾಳ, ಹನುಮಂತರಾವ್ ಪೋಳದ, ರಾಮಣ್ಣ ಮಡಿಕೇರಿ, ದಾದಸಾಹೇಬ, ಮಂಜುನಾಥ ಪೂಜಾರಿ, ಮಲ್ಲಪ್ಪ ಹಾಳಕೆರಿ, ಪರಶುರಾಮ ಪೊಳದ, ಪೀರಸಾಬ ಅಡೂರು, ಈರಪ್ಪ ಬಂಗಿ, ಹನುಮಂತಪ್ಪ ರಾಟಿಮನಿ, ರೈಮಾನಸಾಬ ಎಲಿಗಾರ, ಮುದುಕಪ್ಪ ಮುತ್ತಾಳ, ಹಾಗೂ ರಾಯರೆಡ್ಡಿ ಕಾಲೋನಿಯ ನೂರಾರು ಯುವಕರು ಹಾಗೂ ಮಹಿಳೆಯರೂ ಪಾಲ್ಗೊಂಡಿದ್ದರು.