You are currently viewing BREAKING : ಭಾರೀ ಮೌಲ್ಯದ ಚಿನ್ನಭರಣ ಕಳ್ಳತನ : ಭರ್ಜರಿ ಕಾರ್ಯಾಚರಣೆ ಮೂಲಕ ಆರೋಪಿ ಬಂಧನ!!

BREAKING : ಭಾರೀ ಮೌಲ್ಯದ ಚಿನ್ನಭರಣ ಕಳ್ಳತನ : ಭರ್ಜರಿ ಕಾರ್ಯಾಚರಣೆ ಮೂಲಕ ಆರೋಪಿ ಬಂಧನ!!

ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕಳೆದ 2 ದಿನಗಳ ಹಿಂದೆ ಭಾರಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿತ್ತು, ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಪರಾರಿಯಾಗಿದ್ದ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಇಂದು ಮುಂಡರಗಿ ಪೊಲೀಸರಿಂದ ಕಳೆದ ಎರಡು ದಿನಗಳ ಹಿಂದೆ ಮನೆಯ ಹಿಂದಿನ ಬಾಗಿಲ ಬೀಗಾ ಒಡೆದು ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಕಳ್ಳತನವಾದ 72 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 4 ಲಕ್ಷ 20 ಸಾವಿರ ಮೌಲ್ಯದ ಚಿನ್ನಾಭರಣ

6 ಸಾವಿರ ನಗದು ಕಳ್ಳತನ ಮಾಡಿದ ಕಳ್ಳತನ ಮಾಡಿ ಪರಾರಿಯಾಗಿದ್ದನು. ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದ ರತ್ನಾ ಅಂಗಡಿಯವರ ಮನೆ ಕಳ್ಳತನವಾಗಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆರೋಪಿ ಕಾರ್ತಿಕ ಕೊಂಪಿ ಎಂಬಾತ ಕಳ್ಳತನ ಎಸೆಗಿದ್ದಾನೆ. ಇವನು ಇದೇ ಪಟ್ಟಣದ ಹುಡೇದ ಓಣಿಯ ನಿವಾಸಿ, ಕಳ್ಳತನ ಪ್ರಕರಣದಲ್ಲಿ ಕಳೆದ ಒಂದುವರೆ ವರ್ಷ ಜೈಲ್ ನಲ್ಲಿದ್ದನು ಎಂದು ತಿಳಿದು ಬಂದಿದೆ.

ಜೈಲ್ ನಿಂದ ಹೊರಗೆ ಬಂದು ಮತ್ತೆ ಕಳ್ಳತನ ಮಾಡಿದ್ದ ಕಾರ್ತಿಕ ಆರೋಪಿಯನ್ನ ಬಂಧಿಸಿದ್ದ ಪೊಲೀಸ ಕಾರ್ಯಕ್ಕೆ ಸಾರ್ವಜನಿಕರು ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ವರದಿ : ವೀರೇಶ್ ಗುಗ್ಗರಿ, ಗದಗ 

Prajavikshane

Chandru R Bhanapaur

Leave a Reply

error: Content is protected !!