LOCAL EXPRESS : ಮಂಗಳೂರು TO ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನೂತನ ಬಸ್ ಪ್ರಯಾಣ ವ್ಯವಸ್ಥೆ : ಬಸ್ಸಿಗೆ ಗ್ರಾಮಸ್ಥರಿಂದ ವಿಶೇಷ ಪೂಜೆ!
ಕುಕನೂರ : ಕೊಪ್ಪಳ ಜಿಲ್ಲೆಯ ರಸ್ತೆ ಸಾರಿಗೆಯ ಜಿಲ್ಲಾಧಿಕಾರಿಯವರ ನಿರ್ದೇಶನವನ್ನು ಮಂಗಳೂರ ಸಂಪರ್ಕದ ಕಂದಾಯ ಸಂಗ್ರಹದ ಜನರ ಬೇಡಿಕೆ ಹಲವಾರು ತಿಂಗಳುಗಳಿಂದ ಮನವಿಯ ಕೋರಿಕೆಯನ್ನು ಮಂಗಳೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಅಪಾರ ಸಂಖ್ಯೆಯ ಜನರ ಕೋರಿಕೆಯನ್ನು ಮನ್ನಿಸಿದಂತೆ ಕುಕನೂರ ಡಿಪೋದಿಂದ ನೂತನ ಬಸ್ ಪ್ರಾರಂಭಿಸಲಾಯಿತು.
ಇಂದು ಸಹಮತಿ ಆದೇಶದಂತೆ ಸಾರ್ವಜನಿಕರು ಈ ಹೊಸ ಬಸ್ ಇಂದಿನಿಂದ ಪೂಜಾರ್ಪಣೆ ನೆರವೇರಿಸಿ ಹಸಿರು ಒಪ್ಪಿಗೆಯನ್ನು ಅಪಾರ ಸಂಖ್ಯೆಯ ಭಕ್ತರು ಈ ಊರಿಗೆ ಬಹುಪಾಲು ಜನರ ಬೇಡಿಕೆಯಂತೆ ಸವದತ್ತಿ ಯಲ್ಲಮ್ಮನ ದೇವಾಲಯಕ್ಕೆ ಸಂಪರ್ಕಿಸುವ ಬಸ್ ಪ್ರಾರಂಭವಾಯಿತು.
ಈ ಹೊಸ ಬಸ್ ಮಂಗಳೂರು ಕುಕನೂರ್ ಬನ್ನಿಕೊಪ್ಪ ಅಣ್ಣಿಗೇರಿ ನವಲಗುಂದ ಯಮನೂರ್ ಮಾರ್ಗವಾಗಿ ಸವದತ್ತಿಗೆ ಮುಂಜಾನೆ ಪ್ರಾರಂಭವಾಗಿ ರಾತ್ರಿ ವೇಳೆ ಸಮಯಕ್ಕೆ ಅನುಸಾರದಂತೆ ಮರಳಿ ಮಂಗಳೂರಿಗೆ ಬರುತ್ತದೆ ನಿಗದಿತ ವೇಳೆಗೆ ಲಕ್ಷ್ಯಕೊಡುವ ಈ ಬಸ್ ಸಮಯಕ್ಕೆ ಇಲಾಖೆಯವರ ವೇಳೆಗೆ ಗಮನ ಕೊಡುವುದನ್ನು ಹಾಗೂ ಇಲಾಖೆಗೆ ಹಣದ ಲಾಭ ಸಹ ಇಲಾಖೆಯವರು ಲಕ್ಷ್ಯ ವಹಿಸಿಕೊಳ್ಳಲಾಗುತ್ತಿದೆ.
ನೂತನ ಬಸ್ ಪ್ರಾರಂಭದ ಪೂಜೆಯ ಸಮಯದಲ್ಲಿ ಸೋಮಶೇಖರ ಜಿ ಡಿಪೋ ಮ್ಯಾನೇಜರ್ˌ ಡ್ರೈವರ್ ನಿಂಗಪ್ಪ ಗುಡಿˌ ನಿರ್ವಾಹ ಕಂಡಕ್ಟರ್ ಲಿಂಗಯ್ಯನವರುˌ ಕಂಟ್ರೋಲರ್ ಕಳಕಪ್ಪ ಇಲಕಲ್ ಇವರೆಲ್ಲರಿಗೆ ಗ್ರಾಮದ ಹಿರಿಯರಾದ ಎಂ.ಬಿ.ಅಳವಂಡಿಯವರ ಮೂಲಕ ಗೌರವ ಸಮರ್ಪಿಸಿ ಇವರಿಗೆ ಜನಪರ ಬೆಂಬಲಕ್ಕೆ ಕೈಗೂಡಿಸಿದರು.