LOCAL NEWS : ಮುಂಡರಗಿ ಪೊಲೀಸರ ಭರ್ಜರಿ ಬೇಟೆಗೆ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಪರ್ ಕೇಬಲ್‌ ಕಳ್ಳರು ಬಲೆಗೆ..!

You are currently viewing LOCAL NEWS : ಮುಂಡರಗಿ ಪೊಲೀಸರ ಭರ್ಜರಿ ಬೇಟೆಗೆ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಪರ್ ಕೇಬಲ್‌ ಕಳ್ಳರು ಬಲೆಗೆ..!

LOCAL NEWS : ಮುಂಡರಗಿ ಪೊಲೀಸರ ಭರ್ಜರಿ ಬೇಟೆಗೆ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಪರ್ ಕೇಬಲ್‌ ಕಳ್ಳರು ಬಲೆಗೆ..!

ಮುಂಡರಗಿ: ತಾಲೂಕಿನ ವಿವಿಧ ಗ್ರಾಮಗಳ ಹದ್ದಿನಲ್ಲಿರುವ ಗಾಳಿ ವಿದ್ಯುತ್ ಕಂಬಗಳಲ್ಲಿನ ಕಳ್ಳತನವಾಗಿದ್ದ ಪ್ರತ್ಯೇಕ ಪ್ರಕರಣಗಳಲ್ಲಿನ ಲಕ್ಷಾಂತರ ಮೌಲ್ಯದ ಕಾಪರ್ ಕೇಬಲ್ ಗಳನ್ನ ಪತ್ತೆ ಹಚ್ಚುವಲ್ಲಿ ಗದಗ ಜಿಲ್ಲೆ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಎಂ.ಬಿ.ಸಂಕದ ಹಾಗೂ ನರಗುಂದ ಉಪವಿಭಾಗದ ಡಿಎಸ್ಪಿ ಪ್ರಭುಗೌಡ ಕರೇದಳ್ಳಿ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಅವರ ಸಿಬ್ಬಂದಿಗಳ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿ ಆಗಿದೆ.

ಆರೋಪಿತರಾದ, ಮೈಲಪ್ಪ ಸುಭಾಸಪ್ಪ ಪೂಜಾರ (24) ಸುರೇಶ ದೇವಪ್ಪ ಭಜಂತ್ರಿ (26) ಬಸವರಾಜ ವೀರಪಾಕ್ಷಪ್ಪ ಪ್ಯಾಟಿ (26) ಮಹೇಶ ಸ್ಟಾರೇಪ್ಪ ಹರಿಜನ (23) ಮೈಲಪ್ಪ ಶಿವಪ್ಪ ದುರಗಣ್ಣವರ,ಶರಣಪ್ಪ ಶಿದ್ದಪ್ಪ ಸೋಮಣ್ಣವರ, ಗುಡದಪ್ಪ ಸುರೇಶಪ್ಪ ಸೋಮಣ್ಣವರ, ಮಹೇಶ ಫಕ್ಕೀರಪ್ಪ ಬಾಲಣ್ಣವರ, ರಾಜು ಕಣಿವೆಪ್ಪ ಬಾಲಣ್ಣವರ, ಕುಮಾರ ನಾಗಪ್ಪ ಪೂಜಾರ, ದೇವಪ್ಪ ಮುದಿಯಪ್ಪ ಗುಂಡಿಕೇರಿ, ಮಂಜಪ್ಪ ಶಿವಾನಂದ ಕಾಡಣ್ಣವರ, ಸುನೀಲ ಮಲ್ಲಪ್ಪ ಗುಂಡಿಕೇರಿ, ಅನೀಲ ಮಲ್ಲಪ್ಪ ಗುಂಡಿಕೇರಿ ಅನ್ನುವವರು ಕೇಬಲ್‌ ಕಳ್ಳತನದ ಪ್ರಕರಣದಲ್ಲಿ‌ ಭಾಗಿಯಾಗಿದ್ದು, ಒಟ್ಟು 14 ಜನ ಆರೋಪಿತರಲ್ಲಿ ಸದ್ಯ 4 ಜನ ಆರೋಪಿಗಳನ್ನ ಮುಂಡರಗಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.

ಮುಂಡರಗಿ ತಾಲೂಕಿನ ಹಾರೋಗೇರಿ, ವಿರೂಪಾಪೂರ, ಮಲ್ಲಿಕಾರ್ಜುನಪೂರ ಸೇರಿದಂತೆ ಹಲವು ಗ್ರಾಮಗಳ ಹದ್ದಿಯಲ್ಲಿ ಬರುವ ಗಾಳಿ ವಿದ್ಯುತ್ ಕಂಬಗಳಲ್ಲಿದ್ದ ಕಾಪರ್ ಕೇಬಲ್ ನ್ನ ಈ ಖದೀಮರು ಕಳ್ಳತನ ಮಾಡುತ್ತಿದ್ದರು.

ಆರೋಪಿತರಿಂದ ಒಂದು ಪ್ರಕರಣದಲ್ಲಿ ಸುಮಾರು 4,90,000/- ರೂ ಮೌಲ್ಯದ ಕಾಪರ್ ಕೇಬಲ್ ಹಾಗೂ 2 ಲಕ್ಷ ಮೌಲ್ಯದ ಒಂದು ಟಾಟಾ ಇಂಟ್ರಾ ವಾಹನ ವಶಪಡಿಸಿಕೊಂಡಿದ್ದು, ಇನ್ನೊಂದು ಪ್ರಕರಣದಲ್ಲಿ 60,000/- ರೂ.ಮೌಲ್ಯದ ಕಾಪರ್ ಕೇಬಲ್, 2 ಲಕ್ಷ ಮೌಲ್ಯದ ಲೈಲ್ಯಾಂಡ್‌ ವಾಹನ ಸೇರಿದಂತೆ, ಒಟ್ಟು 04 ಮೋಟರ್ ಸೈಕಲ್ ಗಳನ್ನ ಪೊಲೀಸರು ವಶಪಡಿಸಿಕೊಂಡು, 5 ಲಕ್ಷ 40 ಸಾವಿರ ಮೌಲ್ಯದ, ಒಟ್ಟು 4.90 ಕ್ವಿಂಟಾಲ್ ನಷ್ಟು ಕಾಪರ್ ಕೇಬಲ್ ಗಳನ್ನ ಪೊಲೀಸರು ಪತ್ತೆ ಹಚ್ಚಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ

ಇವರ ಕಾರ್ಯಾಚರಣೆಗೆ ಗದಗ ಎಸ್‌ಪಿ ಬಿ. ಎಸ್.ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದು, ಸೂಕ್ತ ಬಹುಮಾನ ಘೋಶಿಸಿದ್ದಾರೆ.

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!