LOCAL NEWS : ಗ್ಯಾರಂಟಿ ಯೋಜನೆ ಅಡಿಯಲ್ಲಿ ಅವಳಿ ತಾಲೂಕಿಗೆ ಸುಮಾರು 425 ಕೋಟಿ ಹಣ ನೇರ ಜನರಿಗೆ : ಶಾಸಕ ಬಸವರಾಜ ರಾಯರೆಡ್ಡಿ

You are currently viewing LOCAL NEWS : ಗ್ಯಾರಂಟಿ ಯೋಜನೆ ಅಡಿಯಲ್ಲಿ ಅವಳಿ ತಾಲೂಕಿಗೆ ಸುಮಾರು 425 ಕೋಟಿ ಹಣ ನೇರ ಜನರಿಗೆ : ಶಾಸಕ ಬಸವರಾಜ ರಾಯರೆಡ್ಡಿ
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿಯವರ ನೇತೃತ್ವದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಗ್ಯಾರಂಟಿ ಯೋಜನೆ ಅಡಿಯಲ್ಲಿ ಅವಳಿ ತಾಲೂಕಿಗೆ ಸುಮಾರು 425 ಕೋಟಿ ಹಣ ನೇರ ಜನರಿಗೆ : ಶಾಸಕ ಬಸವರಾಜ ರಾಯರೆಡ್ಡಿ

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿಯವರ ನೇತೃತ್ವದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಕುಕನೂರ : ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅದರಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿಯವರ ನೇತೃತ್ವದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ಕುರಿತು ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿದ್ದು, ‘ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹ ಜ್ಯೋತಿ ಯೋಜನೆ ಗಳ ಮೂಲಕ ರಾಜ್ಯ ಬಡ ಜನರಿಗೆ ಕರ್ನಾಟಕ ಸರ್ಕಾರದ ಮೂಲಕ ಚೈತನ್ಯ ತುಂಬುವ ಕೆಲಸ ಆಗಿದೆ. ಒಟ್ಟು ಗ್ಯಾರಂಟಿ ಯೋಜನೆಗಳ ಮೂಲಕ ವರ್ಷಕ್ಕೆ 420 ಕೋಟಿ ಯಲಬುರ್ಗಾ ಕ್ಷೇತ್ರ ಒಂದಕ್ಕೆ ಅನುದಾನ ಸಿಕ್ಕಿದೆ. ಸರ್ಕಾದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಈವರೆಗೆ 425 ಕೋಟಿಗೂ ಹೆಚ್ಚು ಹಣ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಜನರಿಗೆ ತಲುಪಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಹೆಚ್ ಪ್ರಾಣೇಶ್‌, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಂತೋಷ ಕುಮಾರ ಪಾಟೀಲ್, ಯಲಬುರ್ಗಾ ತಹಶೀಲ್ದಾರ್‌ ಬಸವರಾಜ್ ತೆನಳ್ಳಿ, ತಾಲೂಕಾ ಗ್ಯಾರೆಂಟಿ ಅಧ್ಯಕ್ಷರುಗಳಾದ ಸಂಗಮೇಶ್‌ ಗುತ್ತಿ, ಸುಧೀರ್‌ ಕೋರ್ಲಹಳ್ಲಿ, ಜಿಲ್ಲಾ ಗ್ಯಾರೆಂಟಿ ಉಪಾಧ್ಯಕ್ಷ ಖಾಶೀಂ ಸಾಬ್‌ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Leave a Reply

error: Content is protected !!