BIG NEWS : ಅಹಮದಾಬಾದ್ ವಿಮಾನ ದುರಂತ : ಬದುಕುಳಿದ ಏಕೈಕ ಪ್ರಯಾಣಿಕ.!

You are currently viewing BIG NEWS : ಅಹಮದಾಬಾದ್ ವಿಮಾನ ದುರಂತ : ಬದುಕುಳಿದ ಏಕೈಕ ಪ್ರಯಾಣಿಕ.!

ಪ್ರಜಾವೀಕ್ಷಣೆ ಸುದ್ದಿ :-

BIG NEWS : ಅಹಮದಾಬಾದ್ ವಿಮಾನ ದುರಂತ : ಬದುಕುಳಿದ ಏಕೈಕ ಪ್ರಯಾಣಿಕ.!

ಗುಜರಾತ್: ಅಹಮದಾಬಾದ್ ನಿಂದ ಲಂಡನ್ ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ AI 171 ಇಂದು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಇದರಲ್ಲಿ 232 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನವು ಮೇಘನಿನಗರ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿ ಪತನಗೊಂಡಿದೆ. ಆದರೇ ವ್ಯಕ್ತಿಯೊಬ್ಬ ಪವಾಡ ಎನ್ನುವಂತೆ ಅದರಲ್ಲಿ ಬದಕುಳಿದ್ದಿದ್ದಾನೆ ಎಂಬುದೇ ಆಶ್ಚರ್ಯ ಎನ್ನಿಸುತ್ತಿದೆ.

ಈ ಅಪಘಾತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನ ಹೆಸರು ವಿಶ್ವಾಸ್ ಕುಮಾರ್ ರಮೇಶ್ (ವಯಸ್ಸು 39) ಅವರು ಭಾರತೀಯ ಮೂಲದ ಬ್ರಿಟಿಷ್ ಪ್ರಜೆ. ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲವು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದರು. ಸೀಟ್ ಸಂಖ್ಯೆ 11A ನಲ್ಲಿ ಕುಳಿತಿದ್ದ ಪುರುಷ ಪ್ರಯಾಣಿಕ ಅಪಘಾತದಿಂದ ಬದುಕುಳಿದಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜ್ಞಾನೇಂದ್ರ ಸಿಂಗ್ ಮಲಿಕ್ ದೃಢಪಡಿಸಿದ್ದಾರೆ.

ಇದೀಗ ಒಬ್ಬರು ಮಾತ್ರ ಬದುಕುಳಿದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದನ್ನು ದೃಢಪಡಿಸಿದರು ಮತ್ತು ಆಸ್ಪತ್ರೆಯಲ್ಲಿ ವಿಶ್ವಾಸ್ ಅವರನ್ನು ಭೇಟಿಯಾದೆ ಎಂದು ಹೇಳಿದರು.

Leave a Reply

error: Content is protected !!