ಮುದಗಲ್ :- ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಡಗರ…

ಮುದಗಲ್ಲ ವರದಿ..

ಮುದಗಲ್ ; ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಡಗರ…

ಮುದಗಲ್: ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದಸರಾ ಹಾಗೂ ನವರಾತ್ರಿಯ ಅಂಗವಾಗಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು. ಸಂಪ್ರದಾಯದಂತೆ ಠಾಣೆಯಲ್ಲಿ ದುರ್ಗಾದೇವತೆ ಭಾವಚಿತ್ರದ ಜತೆ ವಿಶೇಷವಾಗಿ ಶಸ್ತ್ರಗಳಿಗೆ ಪೂಜೆ ಸಲ್ಲಿಸಿದರು.

ವಿಶಿಷ್ಟ ಆಯುಧ ಪೂಜೆ; ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ಮಾಡಲಾಯಿತು. ಪ್ರತಿದಿನ ಖಾಕಿ ಬಟ್ಟೆಯಲ್ಲಿ ಇರುವ ಪೋಲಿಸರು ಇಂದು ಸಾಂಪ್ರದಾಯಿಕ ಶೈಲಿಯ ಬಿಳಿ ಶರ್ಟ್, ಪಂಚೆಯಲ್ಲಿ ಇದ್ದು ದಸರಾ ಹಬ್ಬವನ್ನು ಆಚರಿಸಿದರು.
ನಂತರ ಮಾತನಾಡಿದ
ಪಿಎಸ್ಐ ವೆಂಕಟೇಶ್ ಮಾಡಗೇರಿ ದಸರಾ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವಿನ ಸಂಕೇತವಾಗಿದೆ.  ಎಲ್ಲರಿಗೂ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಎಂದರು.

ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ್ ಮಾಡಗೇರಿ ಹಾಗೂ  ಸಿಬ್ಬಂದಿಗಳು ಇದ್ದರು.
 ವರದಿ: ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!