ಪ್ರಜಾ ವೀಕ್ಷಣೆ ಸುದ್ದಿ :
LOCAL NEWS : ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ಶಿಕ್ಷಣದ್ದು : ಕೃಷಿ ಅಧಿಕಾರಿ ಪ್ರಕಾಶ್ ರಾಠೋಡ್

ಕನಕಗಿರಿ : ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಣ ಹಾಗೂ ಮೂಲ ಸಂಸ್ಕೃತಿಯ ಬಹುಮುಖ್ಯ ಪಾತ್ರವಹಿಸುತ್ತದೆ, ಅಂದಾಗ ಮಾತ್ರ ಒಂದು ಸಭ್ಯತೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಗಂಗಾವತಿ ಕೃಷಿ ಇಲಾಖೆಯ ಅಧಿಕಾರಿ ಪ್ರಕಾಶ್ ರಾಠೋಡ್ ಹೇಳಿದರು.
ಅಕ್ಟೋಬರ್ 1 ರಂದು ತಾಲೂಕಿನ ನವಲಿತಾಂಡಾದಲ್ಲಿ ಶ್ರೀ ದುರ್ಗಾ ಮಾತಾ ಯುವಕರ ಸಂಘ ನವಲಿ ತಾಂಡದ ವತಿಯಿಂದ “8ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ ಬಂಜಾರ ಸಮುದಾಯ ಭಾರತದಲ್ಲೇ ಶ್ರೇಷ್ಠ ಸಂಪ್ರದಾಯಿಕ ಕೊಡುಗೆ ತೊಡುಗೆಗಳನ್ನು ಹೊಂದಿದ್ದು, ಶ್ರೀಮಂತಿಕೆಯ ಸಂಸ್ಕೃತಿಯನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉದಯನ್ಮುಖವಾಗಿ ಶಿಕ್ಷಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ, ಇವತ್ತು ನವಲಿ ತಂಡದಲ್ಲಿ ಸತತ ಎಂಟು ವರ್ಷಗಳ ಕಾಲ ಶಾಲಾ ಕಾಲೇಜು ಮಕ್ಕಳ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಹಾಗೂ ಮಕ್ಕಳಲ್ಲಿ ಸ್ಪೂರ್ತಿದಾಯಕ ಚಿಂತನೆಯನ್ನು ಮೂಡಿಸುವದರ ಜೊತೆಗೆ ಅವರ ಜೀವನಕ್ಕೆ ಶೈಕ್ಷಣಿಕ ಮಾರ್ಗಗಳನ್ನು ತೋರಿಸುವುದು ಬಹಳ ಉತ್ತಮದ ನಡೆ’ ಎಂದು ಯುವಕರ ಕಾರ್ಯವನ್ನು ಶ್ಲಾಘಿಸಿದರು.
