Post Views: 164
ಮುದಗಲ್ಲ ವರದಿ…
ದಲಿತ ಸಮುದಾಯದ ಪವರ್ ಬ್ರಾಂಡ್ ಶರಣಪ್ಪ ಕಟ್ಟಿಮನಿ…

ಹೋರಾಟ, ಸಂಘಷ೯ ದಿಂದ ಬದುಕು ಕಟ್ಟಿಕೊಂಡ ದಲಿತ ನಾಯಕ :- ಶರಣಪ್ಪ ಕಟ್ಟಿಮನಿ.

ಹಸಿವು, ಬಡತನ,ಅವಮಾನ ಸಾಮಾಜಿಕ ಶೋಷಣೆಗಳ ನಡುವೆ ಎದೆಗುಂದದೆ ಅವಿರತ ಹೋರಾಟ ಹಾಗೂದಲಿತ ಸಂಘರ್ಷ ಸಮಿತಿ ದಿಂದ ಬದುಕು ಕಟ್ಟಿಕೊಂಡು.ತನ್ನ ವ್ಯಕ್ತಿತ್ವವನ್ನು ಸಮಾಜ ಮುಖಿಯಾಗಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳುವುದು ಸಣ್ಣ ಮಾತಲ್ಲ. ಹಾಗೆ ತನ್ನನ್ನು ಕಡೆಗಣಿಸಿದವರ ಮಧ್ಯೆ ಪ್ರಭಾವಿ ದಲಿತ ಮುಖಂಡರಾಗಿ ಬೆಳೆದು ದೃಢವಾಗಿ ನಿಂತವರು ಶರಣಪ್ಪ ಕಟ್ಟಿಮನಿ ಪ್ರಸ್ತುತ ಇವರ ಹೆಸರು ರಾಯಚೂರು ಜಿಲ್ಲೆಯಲ್ಲಿ ಲಿಂಗಸೂರು ತಾಲೂಕಿನ ಮುದಗಲ್ಲ ದಲಿತ ಸಮುದಾಯದ ಪವರ್ ಬಾಂಡ್ ಶರಣಪ್ಪ ಕಟ್ಟಿಮನಿ ಎಂದೇ ಜನಜನಿತ. 

ಸತತ ಮೂವತ್ತು ವರ್ಷಗಳಿಂದ ದಲಿತ ಸಂಘರ್ಷ
ಸಮಿತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹಗಲಿರುಳು ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು ಐತಿಹಾಸಿಕ ಮುದಗಲ್ಲ ಪಟ್ಟಣದ ಶರಣಪ್ಪ ಕಟ್ಟಿಮನಿ , ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಭಾವೈಕ್ಯತೆಯ ಸಂಕೇತ ಐತಿಹಾಸಿಕ ಮುದಗಲ್ಲ ತಂದೆ ಹುಸೇನಪ್ಪ ತಾಯಿ ಹೊಳೆಯಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇಬಡತನದಬೇಗೆಯಲ್ಲಿ ಬೆಂದವರು.

ಸಹೋದರರಾದ ಗ್ಯಾನಪ್ಪ ಕರಿಯಪ್ಪ ತುಂಬು
ಕುಟುಂಬದಲ್ಲಿ ಬೆಳೆದ ಇವರು ಪಿಯುಸಿವರೆಗೂ
ವ್ಯಾಸಂಗ ಮಾಡಿದ್ದಾರೆ.ಅನಾನುಕೂಲತೆ
ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕ್ಷಣ ದಲ್ಲಿ puc ಮುಗಿದ್ದಾರೆ
ಪತ್ನಿ ಹುಲಿಗೆಮ್ಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಇಬ್ಬರು ಜನ ಮಕ್ಕಳು. ಅವರಲ್ಲಿ ಹಿರಿಯ ಮಗನಾದ ಶಶಿಧರ ಇಂಜಿನಿಯರ್ ಮುಗಿಸಿದ್ದು ಮಗಳು ಶಶಿಕಲಾ B.A ಡಿಗ್ರಿ ಮುಗಿಸಿದ್ದಾಳೆ

ಅಪ್ಪನ ಆಶಯದಂತೆ ಜನತೆಯ ಸಾಮಾಜಿಕ
ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ.
ಮೂಲಕ ಜನಸೇವೆಯಲ್ಲಿದಲಿತ ಸಂಘರ್ಷ ಸಮಿತಿ ದಲಿತ ಸಮುದಾಯದ ಪವರ್ ಬ್ರಾಂಡ್ ಶರಣಪ್ಪ ಕಟ್ಟಿಮನಿ ಹೋರಾಟ, ಸಂಘರ್ಷದಿಂದ ಬದುಕು ಕಟ್ಟಕೊಂಡ ದಲಿತ ನಾಯಕ ನಿರತನಾಗಬೇಕು ಎಂಬುದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ರಾದ ಷಮೂ೯ಖಪ್ಪ ಘಂಟೆ , ಹನುಮಂತಪ್ಪ ವೆಂಕಟಪುರ, ಹಾಜಪ್ಪ ಕಡಕಲ್ಲ , ಲಕ್ಕಪ್ಪ ನಾಗರಹಾಳ, ಬಸವರಾಜ ಬಂಕದಮನೆ , ಆಶಯವಾಗಿದೆ.

ಶರಣಪ್ಪ ಕಟ್ಟಿಮನಿ ಅವರು.ಬೆಳೆದು ಬಂದ ಹಾದಿ: ಶೈಕ್ಷಣಿಕವಾಗಿ ಸೋತು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳದ ಶರಣಪ್ಪ ಕಟ್ಟಿಮನಿ ಅವರು ದಲಿತ ಸಂಘರ್ಷ ಸಮಿತಿಯಲ್ಲಿ 500
ಸಾಮಾಜಿಕ ಹೋರಾಟಗಳಲ್ಲಿ ಧುಮುಕಿದರು. ನಿರಂತರ ಹಲವು ಹೋರಾಟಗಳ ಪ್ರತಿಫಲವಾಗಿ ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡರು. ಸರಳ, ಸಜ್ಜನ ಡಿ.ಎಸ್ ಹೂಲಿಗೇರಿ ಅವರಿಂದ ಸಾಮಾನ್ಯ ಮೀಸಲಾತಿಯಲ್ಲಿ ಸಣ್ಣ ಪುಟ್ಟ ಕಾಂಟ್ಯಾಕ್ಟ್ ಕೆಲಸ ಪಡೆದು ಕೊಂಡು ಅಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ

ರಾಯಚೂರು ಜಿಲ್ಲೆಯ ಲಿಂಗಸೂರು ಹಾಗೂ ಮುದಗಲ್ಲ ಪಟ್ಟಣದ ಸೋಶಿಯಲ್ ಪವರ್ ಹೌಸ್ ಎಂದೇ ಖ್ಯಾತಿ ಪಡೆದ ಬಿ. ಕೃಷ್ಣಪ್ಪ (ಪ್ರೊ. ಬಸಪ್ಪ ಕೃಷ್ಣಪ್ಪ) ದಲಿತ ಸಂಘರ್ಷ ಸಮಿತಿಯ (DSS ) ಸಂಘಟನೆ ಯ ಗರಡಿಯಲ್ಲಿ ಬೆಳೆದು, ಸಂಘಟನೆ ತಂತ್ರಗಾರಿಕೆ ಯಲ್ಲಿ ಪಳಗಿರುವ ಇವರಿಗೆ ಮುದಗಲ್ಲ ಹಾಗೂ ಲಿಂಗಸೂರು ಜನತೆಗೆ ಅವರಿಗೆ ಎಲ್ಲಿಲ್ಲ ಪ್ರೀತಿ ಹಾಗೂ ವಿಶ್ವಾಸ, ಕಟ್ಟಿಮನಿ ಅವರ ನಿಯತ್ತು. ಸಮಾಜಿಕ ನಿಷ್ಠೆ ಸಂಘಟನಾ ಶಕ್ತಿಯ ಗುರುತಿಸಿರುವ ಹಿರಿಯರು, ಸಮಾಜದ ಬಂಧುಗಳು ಶರಣಪ್ಪ ಕಟ್ಟಿಮನಿ ಅವರನ್ನು ಕೂಡ ಬೆನ್ನು ತಟ್ಟಿ ಸಮಾಜಿಕ ಹೋರಾಟ ಹಾಗೂ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾಹಿಸಿದ್ದಾರೆ.

ಮಾದಿಗ ಸಮಾಜದ ಒಳ ಮೀಸಲಾತಿ ವಿಚಾರವಾಗಿ ಇವರ ಶ್ರಮ ನಿರಂತರವಾಗಿದೆ. ಜಲ ಜೀವನ್ ಮಷೀನ್ ಅನುಷ್ಠಾನದಲ್ಲಿ ಹಾಗೂ ಹಿಂದೆ ನಡೆದ 24/7 ನಿರಂತರ ಕುಡಿಯುವ ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಸಂಘಟನೆ ಮುಖಾಂತರ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಹೋರಾಟ ಮಾಡಿದ್ದಾರೆ ಶರಣಪ್ಪ ಕಟ್ಟಿಮನಿ ಅಧ್ಯಕ್ಷರಿಗೆ ದಲಿತ ರತ್ನ ಎಂಬ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಕೂಡ ಗೌರವ ಪ್ರಶಸ್ತಿಯನ್ನು ಕೂಡ ನೀಡಲಾಗಿದೆ. ಶರಣಪ್ಪ ಕಟ್ಟಿಮನಿ ಸತತ ಐದು ಬಾರಿ ಲಿಂಗಸೂರು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿ ದೌರ್ಜನ್ಯ ನಿಯಂತ್ರಣ ಕೆಲಸ ಮಾಡಿದ್ದಾರೆ ಸಮಿತಿಯಲ್ಲೂ ಲಿಂಗಸೂರು ತಾಲೂಕು ಅಧ್ಯಕ್ಷರಾಗಿ ಇಂದಿಗೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಪ್ರಸ್ತುತ ಸಮಾಜ ಸೇವೆ ಪರ ಹಗಲಿರುಳು ದುಡಿಯುತ್ತಿದ್ದಾರೆ.ಪ್ರಸ್ತುತ ಲಿಂಗಸೂರು ತಾಲೂಕುಗೆ ಎಸ್.ಸಿ ಪ್ರಭಾವಿ ದಲಿತ ಮುಖಂಡ ಮುಂಚೂಣಿ ಪಟ್ಟಿಯಲ್ಲಿರುವ ಶರಣಪ್ಪ ಕಟ್ಟಿಮನಿ ಅವರು ಮುಂಬರುವ ದಿನಗಳಲ್ಲಿ ಮುದಗಲ್ಲ ಪುರಸಭೆಯ ವಾಡ೯ ಚುನಾವಣೆ ಯಲ್ಲಿ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.

ಭವಿಷ್ಯದಲ್ಲಿ ರಾಜಕೀಯವಾಗಿ ಉತ್ತಮ ಸ್ಥಾನ ಲಭಿಸುವ ವಿಶ್ವಾಸ ಶರಣಪ್ಪ ಕಟ್ಟಿಮನಿ ಅವರಿಗಿದೆ, ಇವರ ಹೋರಾಟ ಮನೋಭಾವ, ಶೋಷಿತರ ಪರ ಕಾಳಜಿ, ಸಂಘಟನಾ ಶಕ್ತಿ ಹಾಗೂ ಪಕ್ಷ ನಿಷ್ಠೆ ಇವರ ರಾಜಕೀಯ ಏಳಿಗೆ ಬುನಾದಿಯಾಗಲಿ.ಸರ್ವ ಸಮುದಾಯಗಳ ಸೇವೆಗೆ ಆ ಭಗವಂತ ಉತ್ತಮ ಅವಕಾಶ ಕಲ್ಪಿಸಲಿ ಎಂಬುದು ಹನುಮಂತ ಬಡಿಗೇರ್, ನಾಗರಾಜ ಕಟ್ಟಿಮನಿ, ಪರಶುರಾಮ ರಾಮತ್ನಾಳ , ಪ್ರಕಾಶ್ ಬಡಿಗೇರ, ಶಿವು , ಭರತ್ ಸಂಜೆ ವಾಣಿ ದಿನ ಪತ್ರಿಕೆ ಶುಭ ಹಾರೈಕೆ.

ಭವಿಷ್ಯದಲ್ಲಿ ರಾಜಕೀಯವಾಗಿ ಉತ್ತಮ ಸ್ಥಾನ ಲಭಿಸುವ ವಿಶ್ವಾಸ ಶರಣಪ್ಪ ಕಟ್ಟಿಮನಿ ಅವರಿಗಿದೆ, ಇವರ ಹೋರಾಟ ಮನೋಭಾವ, ಶೋಷಿತರ ಪರ ಕಾಳಜಿ, ಸಂಘಟನಾ ಶಕ್ತಿ ಹಾಗೂ ಪಕ್ಷ ನಿಷ್ಠೆ ಇವರ ರಾಜಕೀಯ ಏಳಿಗೆ ಬುನಾದಿಯಾಗಲಿ.ಸರ್ವ ಸಮುದಾಯಗಳ ಸೇವೆಗೆ ಆ ಭಗವಂತ ಉತ್ತಮ ಅವಕಾಶ ಕಲ್ಪಿಸಲಿ ಎಂಬುದು ಹನುಮಂತ ಬಡಿಗೇರ್, ನಾಗರಾಜ ಕಟ್ಟಿಮನಿ, ಪರಶುರಾಮ ರಾಮತ್ನಾಳ , ಪ್ರಕಾಶ್ ಬಡಿಗೇರ, ಶಿವು , ಭರತ್ ಶುಭ ಹಾರೈಕೆ.

ವಿಶೇಷ ವರದಿ:- ಮಂಜುನಾಥ ಕುಂಬಾರ…