ಮುದಗಲ್ಲ ವರದಿ..
ಮುದಗಲ್ಲ :- ನಾಗರಹಾಳದಲ್ಲಿ ಸಿಂಧು ಶಿಶು ಸುರಕ್ಷಾ ಯೋಜನೆ ಬಿಡುಗಡೆ..
ನಾಗರಹಾಳ, ಡಿ.14: ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ., ಸಿಂಧನೂರು ವತಿಯಿಂದ ಸಿಂಧು ಶಿಶು ಸುರಕ್ಷಾ ಯೋಜನೆಯ ಮತ್ತೊಂದು ಕಾರ್ಯಕ್ರಮವನ್ನು ನಾಗರಹಾಳ ಶಾಖೆಯ ವತಿಯಿಂದ ಡಿಸೆಂಬರ್ 14 ರಂದು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.

ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ವೀರನಗೌಡ ಪಾಟೀಲ್ ಲೆಕ್ಕಿಹಾಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಯೋಜನೆಯನ್ನು ಉದ್ಘಾಟಿಸಿ ಫಲಾನುಭವಿ ಮಕ್ಕಳಿಗೆ ಠೇವಣಿ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವೀರನಗೌಡ ಪಾಟೀಲ್ ಲೆಕ್ಕಿಹಾಳ ಅವರು,ಇಂತಹ ವಿಶಿಷ್ಟ ಹಾಗೂ ಸಾಮಾಜಿಕ ಬದ್ಧತೆಯ ಯೋಜನೆಯನ್ನು ಇದುವರೆಗೆ ಯಾವುದೇ ಸಹಕಾರಿಯೂ ಜಾರಿಗೆ ತಂದಿಲ್ಲ. ಈ ಯೋಜನೆ ರಾಜ್ಯಮಟ್ಟದಲ್ಲಿ ಪ್ರಚಾರ ಪಡೆದು ಇತರೆ ಸಹಕಾರಿಗಳಿಗೆ ಪ್ರೇರಣೆಯಾಗಬೇಕು,”
ಎಂದು ಹೇಳಿದರು. ಹಿಂದೆ ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದಿದ್ದ ‘ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ’ಯನ್ನು ಹೋಲುವಂತೆ, ಸರ್ಕಾರಿ ಶಾಲೆಗಳ ಉಳಿವು ಹಾಗೂ ಹೆಣ್ಣು ಮಕ್ಕಳ ಭವಿಷ್ಯ ಭದ್ರತೆಗೆ ಸಿಂಧು ಸಹಕಾರಿಯು ರೂಪಿಸಿರುವ ಈ ಯೋಜನೆ ಮಾನ್ಯ ಪ್ರಧಾನಮಂತ್ರಿಗಳ ‘ಬೇಟಿ ಬಚಾವೋ – ಬೇಟಿ ಪಡಾವೋ’ ಯೋಜನೆಯ ಕನ್ನಡಿಯಾಗಿದೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅಂತ್ಯೋದಯ ನಿಧಿ ಹಾಗೂ ಸಾಲ ಸುರಕ್ಷಾ ಯೋಜನೆಯಡಿ ಮೃತರಾದ ಶ್ರೀ ಯಂಕಪ್ಪ ಚನ್ನದಾಸರ ಅವರ ವಾರಸುದಾರರಾದ ಶ್ರೀಮತಿ ದುರಗಮ್ಮ ಗಂಡ ಯಂಕಪ್ಪ ಅವರಿಗೆ ರೂ.75,000/- ಮೊತ್ತದ ಪರಿಹಾರ ಚೆಕ್‌ನ್ನು ವಿತರಿಸಲಾಯಿತು. ಮತ್ತು ಸಹಕಾರಿಯ 2026 ವರ್ಷದ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮಕ್ಕೆ ಸಹಕಾರಿಯ ಅಧ್ಯಕ್ಷರಾದ ಶ್ರೀ ರಾಜಶೇಖರ ಬಿ* ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಹೊನ್ನಪ್ಪ ಮೇಟಿ ಉಪಾಧ್ಯಕ್ಷರು – ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ, *ಶ್ರೀ ಹನುಮಂತಪ್ಪ ಕ್ವಾರಿ, ತಾಲೂಕು ಜನಸಂಪನ್ಮೂಲ ಅಧಿಕಾರಿಗಳು ಹಾಗೂ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಅಮರೇಶ ಹಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಕಾರಿಯ ನಿರ್ದೇಶಕಗಳಾದ ಶ್ರೀ ವಿಜಯಕುಮಾರ್ ಛಾಜೇಡ್, ಶ್ರೀ ಬಸವರಾಜ ಬಿ, ಶ್ರೀ ಶಂಕರಗೌಡ, ಶ್ರೀ ರಾಮಪ್ಪ ಕೆ, ಮುಖ್ಯ ಕಾರ್ಯವಿರ್ವಾಹಕರು , ನಾಗರಹಾಳ ಶಾಖಾ ಸಿಬ್ಬಂದಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ:-ಮಂಜುನಾಥ ಕುಂಬಾರ..