ಕೊಪ್ಪಳ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ದಕ್ಷಿಣ ಭಾರತದ ಕುಂಭಮೇಳ ಪ್ರಸಿದ್ಧಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಭಕ್ತರ ಭಕ್ತಿಯ ತಾಣವಾಗಿದೆ.
ಪ್ರತಿ ವರ್ಷವು ಜಾತ್ರಾ ಮಹಾದಾಸೋಹದಲ್ಲಿ ಅನೇಕ ಭಕ್ತಾಧಿಗಳು ಶ್ರೀಮಠದ ಮಹಾದಾಸೋಹಕ್ಕೆ ವಿವಿಧ ಸೇವೆಯನ್ನು ಸಲ್ಲಿಸಿ ಶ್ರೀ ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾಗುವುದು ಸಂಪ್ರದಾಯವಾಗಿದೆ.
ಈ ವರ್ಷವೂ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಸಂಪೂರ್ಣವಾಗಿ ಖರ್ಚಾಗುವ ಅಡುಗೆ ಎಣ್ಣೆಯ ಸೇವೆಯನ್ನು ಶ್ರೀ ಮಠದ ಭಕ್ತರಾದ ಶ್ರೀಯುತ ಹೀರಾ ರಾಮಜಿ ಆರ್ಯ ಹಾಗೂ ಸಹ ಕುಟುಂಬದವರು, ಭಾಗ್ಯೋದಯ ರೈಸ್ ಇಂಡಸ್ಟ್ರೀಸ್, ಸಾ: ಸಿರುಗುಪ್ಪಾ ಅವರು ಸಲ್ಲಿಸುತ್ತಿದ್ಧಾರೆ.
ಈ ಸೇವೆಯು ಅವರ ತಾಯಿಯವರಾದ ಶ್ರೀಮತಿ ದಿ. ಖೇತುದೇವಿ ಜಿ ಮತ್ತು ತಂದೆಯವರಾದ ಶ್ರೀಮಾನ್ ದಿ. ಧೀಪಾರಾಮ ಜಿ ಹಾಗೂ ಅವರ ಅಣ್ಣನವರಾದ ಶ್ರೀ ದಿ. ಉಮಾರಾಮ ಜಿ ಇವರ ಸ್ಮರಣಾರ್ಥ ಸೇವೆಗೈದಿದ್ದಾರೆ. ಇವರ ಸೇವೆಗೆ ಶ್ರೀ ಮಠದ ಪರಮ ಪೂಜ್ಯರು ಆಶೀರ್ವದಿಸಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.