You are currently viewing LOCAL NEWS : ಕುಕನೂರು | ಗುದ್ನೇಪ್ಪನ ಮಠದ ಜಮೀನಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹಾದಿ ಸುಗಮ : ತಕರಾರು ಅರ್ಜಿ ವಜಾ!

LOCAL NEWS : ಕುಕನೂರು | ಗುದ್ನೇಪ್ಪನ ಮಠದ ಜಮೀನಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹಾದಿ ಸುಗಮ : ತಕರಾರು ಅರ್ಜಿ ವಜಾ!

LOCAL NEWS : ಕುಕನೂರು | ಗುದ್ನೇಪ್ಪನ ಮಠದ ಜಮೀನಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹಾದಿ ಸುಗಮ : ತಕರಾರು ಅರ್ಜಿ ವಜಾ!

ಕುಕನೂರು ಪಟ್ಟಣದ 17ನೇ ವಾರ್ಡ್‌ನಲ್ಲಿ ನೂತನವಾಗಿ ಮಂಜೂರಾಗಿರುವ ತಾಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಜಾಗ.
ಪ್ರಜಾ ವೀಕ್ಷಣೆ ದಿಜಿಟಲ್‌ ಸುದ್ದಿ : 

​ಕುಕನೂರು, ಮೇ 01 : ತಾಲೂಕಿನ ಪ್ರಸಿದ್ಧ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಗುದ್ನೇಪ್ಪನ ಮಠಕ್ಕೆ ಸೇರಿದ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡುವುದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಯನ್ನು ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ನಡೆಯಲಿರುವ ಅಭಿವೃದ್ಧಿ ಕೆಲಸಗಳಿಗೆ ಎದುರಾಗಿದ್ದ ಕಾನೂನು ಕಂಟಕ ನಿವಾರಣೆಯಾದಂತಾಗಿದೆ.

ಪ್ರಕರಣದ ಹಿನ್ನೆಲೆ : ಕುಕನೂರಿನ ಗುದ್ನೇಪ್ಪನ ಮಠಕ್ಕೆ ಸೇರಿದ ಜಮೀನಿನ ಒಂದು ಭಾಗದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲು ಆಡಳಿತ ಮಂಡಳಿ ಹಾಗೂ ಸರ್ಕಾರ ನಿರ್ಧರಿಸಿತ್ತು. ಆದರೆ, ಈ ನಿರ್ಧಾರವನ್ನು ಪ್ರಶ್ನಿಸಿ ಮತ್ತು ಜಮೀನಿನ ಮಾಲೀಕತ್ವದ ಕುರಿತು ಆಕ್ಷೇಪವೆತ್ತಿ ಗುದ್ನೇಪ್ಪನ ಮಠದ ಗ್ರಾಮಸ್ಥರು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಉದ್ದೇಶಿತ ಸರ್ಕಾರಿ ಕಟ್ಟಡಗಳ ಕಾಮಗಾರಿ ಶಂಕು ಸ್ತಾಪನೆ ಸ್ಥಗಿತಗೊಂಡಿತ್ತು.

​ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿದಾರರು ಮಂಡಿಸಿದ ವಾದದಲ್ಲಿ ಪೂರಕ ದಾಖಲೆಗಳಿಲ್ಲದಿರುವುದನ್ನು ಗಮನಿಸಿತು. ಅದು ಅಲ್ಲದೇ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಈ ವ್ಯಾಜ್ಯವಾಗಿದೆ. ಈ ಮಠದ ಜಮೀನಿನಲ್ಲಿ ನಿರ್ಮಾಣವಾಗುವ ಕಟ್ಟಡಗಳು ಸಾರ್ವಜನಿಕ ಸೇವೆಗೆ ಸಂಬಂಧಿಸಿವೆ ಎಂಬ ಅಂಶವನ್ನು ಪರಿಗಣಿಸಿದೆ. ಮಠದ ಆಸ್ತಿಯ ದುರ್ಬಳಕೆಯಾಗುತ್ತಿದೆ ಎಂಬ ಅರ್ಜಿದಾರರ ಆರೋಪಕ್ಕೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಠದ ಸಮ್ಮತಿಯೊಂದಿಗೆ ನಡೆಯುತ್ತಿರುವ ಈ ಕಾಮಗಾರಿಗಳಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

​ಅಭಿವೃದ್ಧಿ ಕಾಮಗಾರಿಗಳಿಗೆ ವೇಗ:

ನ್ಯಾಯಾಲಯದ ಈ ತೀರ್ಪಿನಿಂದಾಗಿ ಕುಕನೂರಿನ ಮಠದ ಜಮೀನಿನಲ್ಲಿ ನಿರ್ಮಾಣವಾಗಬೇಕಿದ್ದ ತಾಲೂಕಾ ಆಡಳಿತ ಕಛೇರಿ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗ ವೇಗ ಸಿಗಲಿದೆ. ಮಠದ ಜಮೀನು ಸಾರ್ವಜನಿಕರ ಸೇವೆಗೆ ಬಳಕೆಯಾಗುತ್ತಿರುವುದು ಸ್ವಾಗತಾರ್ಹ ಎಂದು ಸ್ಥಳೀಯ ಯಮನೂರಪ್ಪ ಕಟ್ಟೀಮನಿ ಅಭಿಪ್ರಾಯಪಟ್ಟಿದ್ದಾರೆ.

ವರದಿ: ಸ್ಥಳೀಯ ಪ್ರತಿನಿಧಿ ಚಂದ್ರು ಆರ್‌ ಬಿ, ಕುಕನೂರು.

Leave a Reply

error: Content is protected !!