You are currently viewing ಮುದಗಲ್ಲ :- 3 ವರ್ಷಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬದಲಾವಣೆ ಅಂದ್ರೆ ಬಡವರಿಗೆ ಮಾಡಿದ ಅನ್ಯಾಯ :- ಗುರಪ್ಪ ಲೆಕ್ಕಿಹಾಳ್..

ಮುದಗಲ್ಲ :- 3 ವರ್ಷಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬದಲಾವಣೆ ಅಂದ್ರೆ ಬಡವರಿಗೆ ಮಾಡಿದ ಅನ್ಯಾಯ :- ಗುರಪ್ಪ ಲೆಕ್ಕಿಹಾಳ್..

ಮುದಗಲ್ಲ ವರದಿ..

ಮುದಗಲ್ಲ :- 3 ವರ್ಷಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬದಲಾವಣೆ ಅಂದ್ರೆ ಬಡವರಿಗೆ ಮಾಡಿದ ಅನ್ಯಾಯ :- ಗುರಪ್ಪ ಲೆಕ್ಕಿಹಾಳ್..

ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲಿ 5 ವರ್ಷ ಪೂರ್ಣಾವಧಿ ಕೊಡಬೇಕು. ಆಗಲೇ ಎಲ್ಲಾ ಗ್ಯಾರಂಟಿ ಯೋಜನೆ ಪೂರ್ಣ ಆಗೋದು.”

ಮುದಗಲ್ಲ :- ರಾಜ್ಯದ ಸಾಮಾಜಿಕ ನ್ಯಾಯದ ರಾಜ- ಕಾರಣಕ್ಕೆ ಹೊಸ ದಿಕ್ಕು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯಾವುದೇ ರಾಜಕೀಯ ಸಂಚು
ಅಥವಾ ಹೈಕಮಾಂಡ್ ಮಟ್ಟದ ಏಕಪಕ್ಷೀಯ ನಿರ್ಧಾರವನ್ನು ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಅಹಿಂದ ಸಮುದಾಯ ಎಂದಿಗೂ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಅಭಿಮಾನಿಗಳಾದ ಗುರಪ್ಪ ಲೆಕ್ಕಿಹಾಳ್ ಅವರು ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ್ದರು

ನಂತರ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾನಪ್ಪ ಆನೆಹೊಸೂರ್ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗಗಳು, ದಲಿತರು,ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳ ಪರವಾಗಿ ದಿಟ್ಟ ಮತ್ತು ಜನಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಅಸ್ಥಿರಗೊಳಿಸಲು ಕೆಲವು ರಾಜಕೀಯ ಶಕ್ತಿಗಳು ಪರೋಕ್ಷ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಬೆಳವಣಿಗೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ರಹ್ಮಾನ್ ಸಾಬ್ ವಾಲೇಕಾರ ರಾಜ್ಯದ ರಾಜಕೀಯ ಇತಿಹಾಸದಲ್ಲ ಹಿಂದುಳಿದ ಸಮುದಾಯಗಳ
ಧ್ವನಿಯಾಗಿ ಹೊರಹೊಮ್ಮಿರುವ ಸಿದ್ದರಾಮಯ್ಯ ಅವರು ಯಾವುದೇ ಕಳಂಕವಿಲ್ಲದೆ ಆಡಳಿತನಡೆಸುತ್ತಿದ್ದು,
ಇಂತಹ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ದೂರ ಮಾಡುವ ಪ್ರಯತ್ನ ನಡೆದರೆ ರಾಜ್ಯದಾದ್ಯಂತ ತೀವ್ರ ಅಸಮಾಧಾನ ಭುಗಿಲೆದ್ದೇ ಬಿಡುತ್ತದೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯನವರ ನೇತೃತ್ವದ ಆಡಳಿತವು ರಾಜ್ಯದಲ್ಲಿ ಜನಪ್ರಿಯವಾಗಿದ್ದು, ಅವರು ಪೂರ್ಣಾವಧಿ ಪೂರೈಸಿದರೆ ಪಕ್ಷಕ್ಕೆ ಹೆಚ್ಚಿನ ಬಲ ಸಿಗುತ್ತದೆ ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಜನರನ್ನು ಒಳಗೊಂಡಿರುವ “ಅಹಿಂದ” ವರ್ಗದ ಪ್ರಬಲ ನಾಯಕರಾಗಿದ್ದು, ಅವರ ನೇತೃತ್ವದ ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ಪೂರ್ಣಾವಧಿ ಮುಂದುವರಿಯಬೇಕು ಹಾಗೂ
ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ತಳಮಟ್ಟದ ಜನರನ್ನು ತಲುಪುತ್ತಿರುವುದ ರಿಂದ, ಈ ಆಡಳಿತಾವಧಿ ಮುಂದುವರಿದರೆ ರಾಜ್ಯಕ್ಕೆ ಒಳಿತು ಹಾಗೂ ಸಿದ್ದರಾಮಯ್ಯನವರು ಬಡವರ ಬಂಧು, ಹಸಿದವರ ಅನ್ನದಾತ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ಕೊಟ್ಟವರು ಅವರು. 3 ವರ್ಷಕ್ಕೆ CM ಬದಲಾವಣೆ ಅಂದ್ರೆ ಬಡವರಿಗೆ ಮಾಡಿದ ಅನ್ಯಾಯ ವಾಗುತ್ತದೆ ಅವರ ಕೈಯಲ್ಲಿ 5 ವರ್ಷ ಪೂರ್ಣಾವಧಿ ಕೊಡಬೇಕು. ಆಗಲೇ ಎಲ್ಲಾ ಗ್ಯಾರಂಟಿ ಯೋಜನೆ ಪೂರ್ಣ ಆಗೋದು ಎಂದರು

ಈ ಸಂದರ್ಭದಲ್ಲಿ ಮಾನಪ್ಪ ಜಿ , ಗ್ಯಾನಪ್ಪ ಕಟ್ಟಿಗೆರ್,
ರಹೆಮಾನ್ ಸಾಬ್ ಅರಗಂಜಿ, ರಹೆಮಾನ್ ಟೈಲರ್, ಗುರಪ್ಪ ಲೆಕ್ಕಿಹಾಳ. ಇತರರು ಉಪಸ್ಥಿತರಿದ್ದರು.

 ವರದಿ:-ಮಂಜುನಾಥ ಕುಂಬಾರ..

Leave a Reply

error: Content is protected !!