You are currently viewing ಮುದಗಲ್ಲ :- ಪುರಸಭೆ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  ಜಯಂತಿ ಆಚರಣೆ..

ಮುದಗಲ್ಲ :- ಪುರಸಭೆ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  ಜಯಂತಿ ಆಚರಣೆ..

ಮುದಗಲ್ಲ ವರದಿ…

ಮುದಗಲ್ಲ :- ಪುರಸಭೆ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  ಜಯಂತಿ ಆಚರಣೆ..

ಮುದಗಲ್ಲ : ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಪಟ್ಟಣ ಪುರಸಭೆ ಕಾರ್ಯಾಲಯ ದಲ್ಲಿ ಗುರುವಾರ ಭಕ್ತಿಪೂರ್ವಕ ವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಯ ಕಂದಾಯ ವಿಭಾಗದ ನಿರೀಕ್ಷಕ
ನಾದ ಅಂತೋಣಿ ರಾಜ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್
ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ನಂತರ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಶಿಕ್ಷಣ, ನೀರಾವರಿ,
ಕೈಗಾರಿಕೆ ಸೇರಿದಂತೆ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ
ಅವರು ಭದ್ರ ಬುನಾದಿ ಹಾಕಿಕೊಟ್ಟ ಮಹಾನ್ ಆಡಳಿತಗಾರ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜರ್ ಸುರೇಶ್ , ಸಿಬ್ಬಂದಿಗಳಾದ ಚನ್ನಮ್ಮ ದಳವಾಯಿ ಹಿರೇಮಠ, ನಿಸಾರ್ ಅಹಮದ್, ಜಿಲಾನಿ ಪಾಶ ,ವೆಂಕಣ್ಣ ದೇಶಪಾಂಡೆ ಗಾಯಕರು ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ..

Prajavikshane

Chandru R Bhanapaur

Leave a Reply

error: Content is protected !!