ಮುದಗಲ್ಲ ವರದಿ..
ವಿದ್ಯುತ್ ಕಂಬಕ್ಕೆ ಲೈಟ್ ಇವೆ ‘ಬೆಳಗುವುದಿಲ್ಲ…!

ಮುದಗಲ್ಲ :-ವಿದ್ಯುತ್ ಕಂಬಗಳಿವೆ, ಆದರೆ ಬಲ್ಪ್‌ಗಳು ಬೆಳಗುವ ಶಕ್ತಿ ಕಳೆದು ಕೊಂಡಿವೆ ಪಟ್ಟಣದ ವಿವಿಧ ವಾಡ೯ಗಳಲ್ಲಿ ಕಂಬಗಳಿಗೆ ಕಂಬಗಳಿವೆ, ಆದರೆ ಬಲ್ಪ್‌ಗಳು ಬೆಳಗುವ ಶಕ್ತಿ ಕಳೆದು ಕೊಂಡಿವೆ ಬೆಳಗದ ವಿದ್ಯುತ್ ದೀಪಗಳು ಆತಂಕದಲ್ಲಿ ಜನ ತೊಂದರೆ ಅನುಭವಿಸುವಂತೆಯಾಗಿದೆ. ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 35 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನ ಬೀದಿಯಲ್ಲೂ ವಿದ್ಯುತ್ ಕಂಬಗಳಿವೆ. ಅವುಗಳಲ್ಲಿ ದೀಪಗಳೂ ಇವೆ. ಆದರೆ ರಾತ್ರಿಯಾದರೂ ಬೆಳಗುವುದಿಲ್ಲ. ಕತ್ತಲಾಗುತ್ತಿದ್ದಂತೆ ಪಟ್ಟಣದ ಬಹುತೇಕ ಭಾಗದಲ್ಲಿ ಮನೆ, ಅಂಗಡಿಗಳಲ್ಲಿ ಅಳವಡಿಸಿ ಕೊಂಡಿರುವ ದೀಪಗಳಿಂದ ಬರುವ ಬೆಳಕಿನಲ್ಲೆ ಜನರ ಸಂಚಾರ, ವ್ಯವಹಾರ ನಡೆಯುವ ಸ್ಥಿತಿ ಇದೆ.

ರಾತ್ರಿಯಾದರೆ ಬೀದಿದೀಪಗಳು ಉರಿಯದ ಕಾರಣದಿಂದ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿ, ಗಿಡಗಂಟಿ ಬೆಳೆದಿರುವ ಕಡೆಯಲ್ಲಿ ಹಾವುಗಳ ಕಾಟ ಮುಂತಾದ ಸಮಸ್ಯೆಗಳ ನಡುವೆ ಓಡಾಡುವುದು ಕಷ್ಟವಾಗುತ್ತಿದೆ.
ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾ ಗಿದೆ. ಅಳವಡಿಸಿರುವ ಹೈಮಾಸ್ಟ್ ದೀಪಗಳೂ ಉರಿಯುತ್ತಿಲ್ಲ. ಕೆಲ ಕಂಬಗಳಲ್ಲಿ ದೀಪಗಳೇ ಇಲ್ಲ. ಪುರಸಭೆ ಮುಂಭಾಗದಲ್ಲಿ ಮಾತ್ರ ಈಚೆಗೆ ದೀಪ ಉರಿಯುತ್ತಿದೆ. 100% ವಿದ್ಯುತ್ ಕಂಬಗಳಲ್ಲಿ ದೀಪಗಳನ್ನು ಅಳವಡಿಸಲಾಗಿದ್ದು, ಶೇ 65ರಷ್ಟು ದೀಪಗಳು ಬೆಳಗುತ್ತಿಲ್ಲ ಬೀದಿ ದೀಪದ ಕಂಬಗಳು ಇದ್ದರೂ ಅವುಗಳಿಗೆ ಬಲ್ಬು ಜೋಡಣೆ ನಿರ್ವಹಣೆ ಇಲ್ಲದ ಕಾರಣ ಸೂರ್ಯಾಸ್ತದ ನಂತರ ಪಟ್ಟಣದ 1 ಹಾಗೂ 2 & 9 ಹಾಗೂ11 ಹಾಗೂ 12 ವಾಡ೯ಗಳಲ್ಲಿ ಜನರು ದಿನನಿತ್ಯ ಕತ್ತಲಲ್ಲೆ ಕಾಲ ಕಳೆಯುವಂತಾಗಿದೆ.

ರಾತ್ರಿಯಲ್ಲಿ ಕಳ್ಳಕಾಕರ ಭಯ ಒಂದೆಡೆಯಾದರೆ, ಬೀದಿನಾಯಿಗಳ ಕಾಟ ಮತ್ತೊಂದೆಡೆ ಸಾರ್ವಜನಿಕ ರನ್ನು ಕಂಗೆಡಿಸಿದೆ.ಕಳೆದ ಹಲವು ತಿಂಗಳಿಂದ ಇಲ್ಲಿನ ರಸ್ತೆ ಬದಿ ಇರುವ ವಿದ್ಯುತ್ ದೀಪಗಳು ಬೆಳಗದೆ ಕತ್ತಲಮಯ ವಾಗಿದೆ. ನಿತ್ಯ ರಸ್ತೆಯಲ್ಲಿ ಜನರು ಭಯದಲ್ಲೇ ಸಂಚರಿಸುವಂತಾಗಿದೆ.
ನಿರ್ಲಕ್ಷ ಕ್ಕೊಳಗಾದ ವಾಡ೯ಗಳು ರಸ್ತೆಯ ಎರಡು ಬದಿಗಳಲ್ಲಿ ಆದಷ್ಟು ಬೇಗ ದೀಪಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಪುರಸಭೆ ಮುಂದೆ ದರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಅವರು ಎಚ್ಚರಿಸಿದ್ದಾರೆ.

ಹಾವು ಚೇಳುಗಳ ಭಯ: ಕತ್ತಲಾದ ನಂತರ ಮನೆಯಿಂದ ಹೊರಗಡೆ ಹೋಗುವಂತಿಲ್ಲಾ . ಹೊರಗಡೆ ಕಾಲು ಇಟ್ಟರೆ ಎಲ್ಲಿ ಚೇಳು, ಹಾವು ಕಚ್ಚುತ್ತವೆ ಎಂಬ ಭಯದಲ್ಲಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ನೀಡಿ ಬೀದಿ ದೀಪ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷ ಬಸವರಾಜ ಬಂಕದಮನೆ ,ಸ್ಥಳೀಯ ರಾದ ಅಮರಪ್ಪ , ಮಲ್ಲಮ್ಮ , ದೇವಮ್ಮ , ವೆಂಕಟೇಶ್,ರಾಮಣ್ಣ ಬಂದಕಮನೆ ಒತ್ತಾಯಿಸಿದ್ದರು

ವರದಿ :- ಮಂಜುನಾಥ ಕುಂಬಾರ