ಮುದಗಲ್ಲ : ನೆಲ ಬಾಡಿಗೆ ಹರಾಜು ಪ್ರಕ್ರಿಯೆ 5 ಲಕ್ಷ ರೂಪಾಯಿ ಗೆ ಹರಾಜು ಪಡೆದ ಮಹ್ಮದ ರಸೂಲ್ ..

ಮುದಗಲ್ಲ. ವರದಿ…

ಮೊಹರಂ : ನೆಲ ಬಾಡಿಗೆ ಹರಾಜು ಪ್ರಕ್ರಿಯೆ 5 ಲಕ್ಷ ರೂಪಾಯಿ ಗೆ ಹರಾಜು ಪಡೆದ  ಮಹಮ್ಮದ್ ರಸೂಲ್ ..

ಮುದಗಲ್ : ಇಲ್ಲಿನ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಮೊಹರಂ ನೆಲ ಬಾಡಿಗೆ ಹರಾಜು ಪ್ರಕ್ರಿಯೆ ಮಂಗಳವಾರ ಜರುಗಿತು.

2026-27ನೇ ಸಾಲಿನ ಗುರುವಾರ ಮುಂದೂಡಿದ ಮರು ಹರಾಜು ಪ್ರಕ್ರಿಯೆ ಮಂಗಳವಾರ ಪ್ರಾರಂಭಗೊಂಡ ಮೊದಲ ಹಂತದಲ್ಲಿ ಮುಖ್ಯಾಧಿಕಾರಿ ಪ್ರವೀಣ್ ಕುಮಾರ ಬೋಗಾರ್ ಆದೇಶದಂತೆ ಸರ್ಕಾರಿ ಹವಾಲು ರೂ. 4ಲಕ್ಷ 26ಸಾವಿರ ನಿಗದಿಪಡಿಸಲಾಗಿತ್ತು.

ಹರಾಜು ಪ್ರಕ್ರಿಯೆಯಲ್ಲಿ 11 ಜನ ಬಿಡ್ದದಾರರು ಭಾಗವಹಿಸಿದ್ದರು. ಶುರುವಾದ ಹರಾಜು ಮೈಬುಸಾಬ ಅವರು 4.99 ಲಕ್ಷ ರೂಪಾಯಿ ಕೂಗಿದರು ನಂತರ ಮಹಮ್ಮದ್ ರಸೂಲ್ ಅವರು ಸರಿಸುಮಾರು  ರೂ.5 ಲಕ್ಷ ಕೂಗಿ ನೆಲ ಮಾಳಿಗೆ ಹರಾಜುನಲ್ಲಿ  ಪಡೆದ್ದಿದ್ದಾರೆ .

ಪುರಸಭೆ ಸಿಬ್ಬಂದಿ ಎಸ್ ಡಿ ಎ ನಿಸ್ಸಾರ್ ಅಹಮದ್ ಅವರು ಮುಂದೂಡಿದ ಸಾರ್ವಜನಿಕ ಬಹಿರಂಗ ಮರುಹರಾಜು ಪ್ರಕಟಣೆ ಸಭೆಯಲ್ಲಿ ಓದಿ ತಿಳಿಸಿದರು.

ಈ ವೇಳೆ ನೂತನ ಪುರಸಭೆ ವ್ಯವಸ್ಥಾಪಕ ಜಗದೀಶ ಎ. ಬಿರಾದಾರ, ಕಂದಾಯ ನಿರೀಕ್ಷಕ ಅಂತೋನಿರಾಜ, ಸಂಪತ್ ಕುಮಾರ ವಿಶ್ವಕರ್ಮ ಸೇರಿದಂತೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

 

Prajavikshane

Chandru R Bhanapaur

Leave a Reply

error: Content is protected !!