ಪ್ರಜಾವೀಕ್ಷಣೆ ಸುದ್ದಿಜಾಲ
ಕುಕನೂರು : ಸಿಂಗಟಾಲೂರು ಏತ ನೀರಾವರಿ ಪ್ರದೇಶದಲ್ಲಿ ನವಿಕರಿಸಿದ ಇಂಧನ ಇಲಾಖೆಯಿಂದ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕುರಿತಂತೆ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಧ್ಯಾಪಕ ಶಂಕರರೆಡ್ಡಿ ಸೋಮರೆಡ್ಡಿ ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಲಾರ್ ಪಾರ್ಕ್ ನಿರ್ಮಾಣದಿಂದ ರೈತರ ಪಲವತ್ತಾದ ಜಮೀನು ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಂಗಟಾಲೂರು ಏತ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿದ್ದು ಈ ಕುರಿತಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ನಾವಿಕರಿಸಬಹುದಾದ ಇಂಧನ ಇಲಾಖೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ಮದ್ಯ ಪ್ರದೇಶದ ಮಾದರಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಗದಗ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವಸಲುವಾಗಿ 2015 ರಲ್ಲಿ 5 ಸಾವಿರ ಕೋಟಿ ರೂ ಮೊತ್ತದ ಅನುಮೋದನೆ ಕೊಡಲಾಗಿತ್ತು, ಅದರಂತೆ ಈಗಾಗಲೇ ಯೋಜನೆ ಪ್ರಗತಿಯಲ್ಲಿ ಇದ್ದು ಇದುವರೆಗೂ ಸುಮಾರು 3 ಸಾವಿರದ ಒಂಬೈನೂರು ಕೋಟಿ ಹಣ ವ್ಯಯಿಸಿ ಪೈಪ್ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿದ್ದು ಉದ್ದೇಶಿತ ಯೋಜನೆಯ ಬಗ್ಗೆ ಚಕಾರ ಶುರುವಾಗಿದೆ.



