ಭಾರತ ಟಿ-20 ವಿಶ್ವಕಪ್ ಗೆಲುವು : ಕನ್ನಡಿಗ ರಾಹುಲ್ ದ್ರಾವಿಡ್ ಸದನದಲ್ಲಿ “ಗೌರವ ಸಲ್ಲಿಸಲು ನಿರ್ಣಯ”

You are currently viewing ಭಾರತ ಟಿ-20 ವಿಶ್ವಕಪ್ ಗೆಲುವು : ಕನ್ನಡಿಗ ರಾಹುಲ್ ದ್ರಾವಿಡ್ ಸದನದಲ್ಲಿ “ಗೌರವ ಸಲ್ಲಿಸಲು ನಿರ್ಣಯ”

ಪ್ರಜಾ ವೀಕ್ಷಣೆ ಸುದ್ದಿಜಾಲ:-

ಬೆಂಗಳೂರು : ಟೀಂ ಇಂಡಿಯಾವು 2024ರ ಟಿ-20 ವಿಶ್ವಕಪ್ ಗೆಲುವು ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಸದನದಲ್ಲಿ “ಅಭಿನಂದನಾ ಗೌರವ” ಸಲ್ಲಿಸಲು ಇಂದಿನ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಭಾರತ ತಂಡವು ಟಿ-20 ವಿಶ್ವಕಪ್ ಗೆಲುವಿನ ವೇಳೆಯಲ್ಲಿ ಮುಖ್ಯ ಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸನ್ಮಾನಿಸುವ ಮನವಿನ್ನು ಸದನದಲ್ಲಿ ಮಾಡಿದರು. ಶಾಸಕ ಸುರೇಶ್ ಕುಮಾರ್ ಅವರ ಮನವಿಗೆ ಸದನದ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒಮ್ಮತದ ಒಪ್ಪಿಗೆಯನ್ನು ನೀಡಿದರು.

ಈ ಹಿನ್ನಲೆಯಲ್ಲಿ ವಿಧಾನಸಭೆಯಿಂದ ಭಾರತ ತಂಡವು ಟಿ-20 ವಿಶ್ವಕಪ್ ಗೆಲುವಿಗೆ ಕಾರಣವಾದಂತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸುವಂತ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ ತಿಳಿಸಿದರು.

Leave a Reply

error: Content is protected !!