ಲಕ್ಷ್ಮೇಶ್ವರ : ಬಾಲೆಹೊಸೂರು ಗ್ರಾಮದ ಅಂಗನವಾಡಿ 93 ಕೇಂದ್ರದಲ್ಲಿ ನಡೆದ. ಪೋಷಣ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೃತ್ಯುಂಜಯ ಗುಡ್ಡದಾನ್ವೇರಿ ಅವರು ಮಾತನಾಡಿ. ಗರ್ಭಿಣಿಯರು ಸ್ಥಳೀಯವಾಗಿ ಸಿಗುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಹೇಳಿದರು.
ಅತಿಥಿಗಳಾದ ತಾಲೂಕು ದಂಡಾಧಿಕಾರಿಗಳಾದ ವಾಸುದೇವ ಸ್ವಾಮಿ, ಇ ಓ ಕೃಷ್ಣಪ್ಪ ಧರ್ಮರ ನಾಗರಾಜ್ ಕಳಸಾಪುರವರು ಗರ್ಭಿಣಿಯರು ಸೇವಿಸುವ ಆಹಾರ ಪದ್ಧತಿಯ ಬಗ್ಗೆ ವಿಸ್ತಾರವಾಗಿ ಸವಿಸ್ತರವಾಗಿ ಮಾಹಿತಿಯನ್ನು ನೀಡಿದರು. ಈ ಸಮಯದಲ್ಲಿ ಚೊಚ್ಚಲ ಗರ್ಭಿಣಿಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡಿದರು.
ಈ ವೇಳೆ ತಾಲೂಕು ವಲಯ ಅಂಗನವಾಡಿ ಮೇಲ್ವಿಚಾರಕರಾದ ಗೀತಾ ಮುಳುಗುಂದ, ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ದಿಂಗಾಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಗರ್ಭಿಣಿಯರು ಭಾಗಿಯಾಗಿದ್ದರು.